ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರೇಲ್ವೆಯಲ್ಲಿ ಭ್ರಷ್ಟಾಚಾರ: ಸಿಬಿಐ ವಿರುದ್ಧ ಬಿಜೆಪಿ ಪ್ರತಿಭಟನೆ

Mainashree
Updated On : 20 May 2013, 3:44 am

ಚಂಡೀಗಡ್: ರೇಲ್ವೆ ಇಲಾಖೆಯಲ್ಲಿ ನಡೆದ ಹಗರಣವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಚಂಡೀಗಡ್‌ನಲ್ಲಿರುವ ಸಿಬಿಐ ಕಛೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಕರ್ತರ ಮೇಲೆ ಜಲಫಿರಂಗಿ ನಡೆಸಿದ ಪರಿಣಾಮ 10 ಜನ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಬಿಜೆಪಿ ನಾಯಕ ಹರ್‌ಮೋಹನ್ ಧಾವನ್ ನೇತೃತ್ವದಲ್ಲಿ ಅನೇಕ ಸ್ಥಳೀಯ ಪಕ್ಷದ ಕಾರ್ಯಕರ್ತರು ಸಿಬಿಐನ ಇನ್ಸ್‌ಪೆಕ್ಟರ್ ಮಹೇಶ್ ಅಗರ್‌ವಾಲ್ ಅವರ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು.

ಪ್ರತಿಭಟನೆ ರ್ಯಾಲಿ ಮೂಲಕ ಸಿಬಿಐ ಕಚೇರಿ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಅವರನ್ನು ತಡೆಯಲೆತ್ನಿಸಿ, ವಿಫಲವಾದ ಹಿನ್ನಲೆಯಲ್ಲಿ ಜಲಫಿರಂಗಿ ನಡೆಸಿದ್ದಾರೆ. ಇದರಿಂದಾಗಿ ಮಹಿಳೆಯರು ಸೇರಿದಂತೆ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಈ ಮಾತನ್ನು ತಳ್ಳಿಹಾಕಿರುವವ ಧಾವನ್, ಬನ್ಸಾಲ್ ಅವರಿಗೆ ಮಹೇಶ್ ಅಗರ್‌ವಾಲ್ ತುಂಬಾ ಆಪ್ತರು. ನಾವು ಅವರ ವಿರುದ್ಧ ಶಾಂತಿಯುತವಾಗಿ ಧರಣಿ ಮಾಡುತ್ತಿದ್ದೆವು. ಆದರೆ ನಮ್ಮ ಮೇಲೆ ಪೊಲೀಸರು ಜಲ ಫಿರಂಗಿ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement