ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲಾಲುವಿನ ಟೀಕೆಗಳನ್ನು ಜೀರ್ಣಿಸಿಕೊಳ್ಳಬಲ್ಲೆ: ನಿತೀಶ್

Mainashree
Updated On : 20 May 2013, 4:24 am

ಪಾಟ್ನಾ: ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮಾಡಿರುವಂತಹ ಟೀಕೆಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಹೇಳಿದ್ದಾರೆ.

ಲಾಲು ಮನ ಬಂದಂತೆ ಟೀಕೆಗಳನ್ನು ನೀಡುತ್ತಿದ್ದರೆ ನಾನು ಸಹಿಸಿಕೊಳ್ಳಬಲ್ಲೇನು. ಆದರೆ ಇತರೆ ನಾಯಕರು ಸಹಿಸುವುದಿಲ್ಲ. ಕೋರ್ಟ್ ಮೆಟ್ಟಿಲೇರುತ್ತಾರೆ ಎಂದು ಹೇಳಿದ್ದಾರೆ.

ಲಾಲು ಟೀಕೆಗಳಿಗೆ ವಿರೋಧ ವ್ಯಕ್ತಪಡಿಸಿ ಎಂಎಲ್‌ಸಿ ಸಂಜಯ್ ಸಿಂಗ್ ಅವರು ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಬಿಹಾರದ ಜನತೆ ಲಾಲುವಿಗೆ ಧೀರ್ಘಕಾಲ ಅಧಿಕಾರ ನೀಡಿದ್ದರು. ಆದರೆ ಲಾಲು ಆ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಜನ ತಮ್ಮನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಪಕ್ಷ ಸಮಯವನ್ನು ವ್ಯರ್ಥ ಮಾಡದೇ ರಾಜ್ಯದ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಲಾಲು ಪ್ರಸಾದ್ ಯಾದವ್ ನಿರುದ್ಯೋಗಿಯಾಗಿದ್ದಾರೆ. ಉದ್ಯೋಗ ಬೇಕು ಎಂಬ ಆಸೆಯಲ್ಲಿ ತಮ್ಮ ವಿರುದ್ಧ ಅನಾಗರಿಕ ಪದಗಳನ್ನು ಬಳಸಿ ಹೇಳಿಕೆ ನೀಡುತ್ತಿದ್ದಾರೆ ಎಂದ ಅವರು, ಲಾಲು ಪ್ರಸಾದ್ ಅವರ ಪ್ರತಿಭಟನಾ ರ್ಯಾಲಿಯನ್ನು ನಾವು ಲೆಕ್ಕಿಸುವುದಿಲ್ಲ. ಏಕೆಂದರೆ ಜನರು ಅವರ 15 ವರ್ಷದ ಆಡಳಿತವನ್ನು ಗಮನಿಸಿದ್ದಾರೆ. ಇದರಿಂದ ನಮಗೆ ಯಾವುದೇ ಪೆಟ್ಟು ಬೀಳುವುದಿಲ್ಲ ಎಂದು ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement