ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಪಾಟ್ ಫಿಕ್ಸಿಂಗ್: ಚಂಡೀಲಾ ಸಂಬಂಧಿಕರ ಮನೆ ಮೇಲೆ ಪೊಲೀಸ್ ದಾಳಿ

ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಂದಿತನಾಗಿರುವ ಅಜಿತ್ ಚಂಡೀಲಾ ಅವರ ಸಂಬಂಧಿಕರ ಮನೆಗೆ ಪೊಲೀಸರು ಸೋಮವಾರ ದಾಳಿ...

Rashmi Kasaragodu
Updated On : 20 May 2013, 3:27 am

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಂದಿತನಾಗಿರುವ ಅಜಿತ್ ಚಂಡೀಲಾ ಅವರ  ಸಂಬಂಧಿಕರ ಮನೆಗೆ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ. ಫರೀದಾಬಾದ್‌ನಲ್ಲಿರುವ ಚಂಡೀಲಾ ಸಂಬಂಧಿಕರ ಮನೆಯಿಂದ ಒಟ್ಟು 20 ಲಕ್ಷ ರು. ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆದಾಗ್ಯೂ, ಬಂಧಿತರಾಗಿರುವ ಮೂವರು ಆಟಗಾರರನ್ನು ಮತ್ತು ಬುಕ್ಕಿಗಳ ವಾಯ್ಸ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಬುಕ್ಕಿಗಳ ಜತೆ ಕ್ರಿಕೆಟಿಗರು ನಡೆಸಿದ ಫೋನ್ ಸಂಭಾಷಣೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ಸಲುವಾಗಿ ವಾಯ್ಸ್ ಸ್ಯಾಂಪಲ್‌ಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತ ಸ್ಪಾಟ್ ಫಿಕ್ಸಿಂಗ್ ಆರೋಪಿಗಳಾದ ಚಂಡೀಲಾ ಮತ್ತು ಶ್ರೀಶಾಂತ್‌ರನ್ನು ದೆಹಲಿ ಪೊಲೀಸರ ವಿಶೇಷ ದಳ ಸತತ ನಾಲ್ಕನೇ ದಿನವೂ ವಿಚಾರಣೆಗೊಳಪಡಿಸಿದೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಬಿಸಿಸಿಐ ಭಾನುವಾರ ತುರ್ತು ಸಭೆ ಕರೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement