ಸ್ಪಾಟ್ಫಿಕ್ಸಿಂಗ್: ಬಂಧನದ ವೇಳೆ ಶ್ರೀಶಾಂತ್ ಕುಡಿದಿದ್ದ!
ಮುಂಬೈಯ ಕಾರ್ಟರ್ ರೋಡ್ನಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ಶ್ರೀಶಾಂತ್ನನ್ನು ಪೊಲೀಸರು ಬಂಧಿಸುವ ವೇಳೆ...
ನವದೆಹಲಿ: ಮುಂಬೈಯ ಕಾರ್ಟರ್ ರೋಡ್ನಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ಶ್ರೀಶಾಂತ್ನನ್ನು ಪೊಲೀಸರು ಬಂಧಿಸುವ ವೇಳೆ ಆತ ಪಾನಮತ್ತನಾಗಿದ್ದ ಮತ್ತು ಆತನೊಂದಿಗೆ ಯುವತಿಯರು ಇದ್ದರೆಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಶ್ರೀಶಾಂತ್ನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ಆತ ನನಗೆ ಕೇರಳ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಆಪ್ತರು ಎಂದು ಜಗಳವಾಡಲು ಶುರುಮಾಡಿದ್ದಾನೆ.
ಕೊನೆಗೆ ಪೊಲೀಸರು ತಮ್ಮ ಗುರುತಿನ ಚೀಟಿ ತೋರಿಸಿದಾಗ ಶ್ರೀಶಾಂತ್ ಶಾಂತನಾಗಿದ್ದಾನೆ. ಆಮೇಲೆ ದಿಢೀರನೆ ನಾನು ಇಬ್ಬರು ಮುಖ್ಯಮಂತ್ರಿಗಳಿಗೆ ಆಪ್ತ, ನೀವು ಅದ್ಹೇಗೆ ನನ್ನನ್ನು ಅರೆಸ್ಟ್ ಮಾಡುತ್ತೀರಾ? ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ ಎಂದು ಬಲ್ಲಮೂಲಗಳು ಹೇಳಿವೆ.
ಇದು ಮಾತ್ರವಲ್ಲದೆ, ಮುಖ್ಯಮಂತ್ರಿಯವರಲ್ಲಿ ನೀವೇ ಮಾತನಾಡಿ ಎಂದು ತನ್ನ ಮೊಬೈಲ್ ಫೋನ್ನ್ನು ಪೊಲೀಸರಿಗೆ ಕೊಟ್ಟಿದ್ದಾನೆ.
ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ದೆಹಲಿ ಪೊಲೀಸರ ವಿಶೇಷ ದಳವು ಗುರುವಾರ ಕ್ರಿಕೆಟಿಗರಾದ ಶ್ರೀಶಾಂತ್, ಅಂಕಿತ್ ಚೌವಾಣ್ ಮತ್ತು ಅಜಿತ್ ಚಂಡೀಲಾ ಸೇರಿದಂತೆ 12 ಬುಕ್ಕಿಗಳನ್ನು ಬಂಧಿಸಿತ್ತು.