ಅಮೆರಿಕದಲ್ಲಿ ಭಾರಿ ಸುಂಟರಗಾಳಿ: 90 ಸಾವು
ಪ್ರಕೃತಿ ವಿಕೋಪಕ್ಕೆ ಅಮೆರಿಕದ ಓಕ್ಲಾಹೋಮ ನಗರ ತತ್ತರಿಸಿದ್ದು, ಅಮೆರಿಕದಲ್ಲಿ ಬೀಸುತ್ತಿರುವ ಭಾರಿ ವೇಗದ..
ವಾಷಿಂಗ್ಟನ್: ಪ್ರಕೃತಿ ವಿಕೋಪಕ್ಕೆ ಅಮೆರಿಕದ ಓಕ್ಲಾಹೋಮ ನಗರ ತತ್ತರಿಸಿದ್ದು, ಅಮೆರಿಕದಲ್ಲಿ ಬೀಸುತ್ತಿರುವ ಭಾರಿ ವೇಗದ ಸುಂಟರಗಾಳಿಗೆ ಸಿಲುಕಿ 20 ಮಕ್ಕಳು ಸೇರಿದಂತೆ 90ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಪ್ರತಿ ಗಂಟೆಗೆ ಸುಮಾರು 320 ಕಿ.ಮಿ ವೇಗದಲ್ಲಿ ಈ ಸುಂಟರಗಾಳಿ ಬೀಸುತ್ತಿದ್ದು, ಅಮೆರಿಕ ಇತಿಹಾಸದಲ್ಲಿಯೇ ಅತೀ ವೇಗದ ಸುಂಟರಗಾಳಿ ಇದಾಗಿದೆ ಎಂದು ಅಲ್ಲಿನ ವಿಜ್ಞಾನಿಗಳು ತಿಳಿಸಿದ್ದಾರೆ.
ಸುಂಟರಗಾಳಿಗೆ ಸಿಲುಕಿ ಮಕ್ಕಳು ಸೇರಿದಂತೆ ಕನಿಷ್ಟ 91 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಇದೆ ಎಂದು ಓಕ್ಲಾಹೋಮ ನಗರದ ವೈದ್ಯಕೀಯ ಪರಿವೀಕ್ಷಕರು ತಿಳಿಸಿದ್ದಾರೆ. ಅಲ್ಲದೆ 70 ಮಕ್ಕಳು ಸೇರಿದಂತೆ 145ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಗಳು ಖಚಿತ ಪಡಿಸಿವೆ.
ಸುಂಟರಗಾಳಿಗೆ ಶಾಲಾ ಕಟ್ಟಡಗಳು ಸೇರಿದಂತೆ ಹಲವು ಕಟ್ಟಡಗಳು ಕುಸಿದು ಬಿದ್ದಿವೆ. ವಾಹನಗಳು ಜಕಂಗೊಂಡಿವೆ.