ಬ್ರಹ್ಮೋಸ್ ಪರಿಕ್ಷಾರ್ಥ ಉಡಾವಣೆ ಯಶಸ್ವಿ
ಸ್ವದೇಶಿ ನಿರ್ಮಿತ ಹಾಗೂ ಸುಮಾರು 290 ಕಿಲೋ ಮೀಟರ್ ದೂರ ಸಾಗುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ...
ಪಣಜಿ: ಸ್ವದೇಶಿ ನಿರ್ಮಿತ ಹಾಗೂ ಸುಮಾರು 290 ಕಿಲೋ ಮೀಟರ್ ದೂರ ಸಾಗುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಯ ಪರಿಕ್ಷಾರ್ಥ ಉಡಾವಣೆ ಬುಧವಾರ ಯಶಸ್ವಿಯಾಗಿದೆ.
ಗೋವಾ ಕರಾವಳಿ ತೀರದಲ್ಲಿ ಬೆಳಿಗ್ಗೆ 11 ಗಂಟೆಗೆ ನೌಕಾ ಪಡೆಗೆ ಸೇರಿದ ಐಎನ್ಎಸ್ ತರಕಾಶ್ ಯುದ್ಧನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಉಡ್ಡಾಯಿಸಲಾಯಿತು.
ಬ್ರಹ್ಮೋಸ್ ವಾಯುನೆಲೆ ಮುಖ್ಯಸ್ಥ ಎ. ಶಿವಧನು ಪಿಳ್ಳೈ ಮಾತನಾಡಿ, ಬ್ರಹ್ಮೋಸ್ ಅನ್ನು ನೌಕಾಪಡೆಗೆ ಸೇರಿಸಿಕೊಳ್ಳುವ ಸಂಬಂಧ ಪರಿಕ್ಷಾರ್ಥ ಪ್ರಯೋಗ ನಡೆಸಲಾಯಿತು ಎಂದು ಹೇಳಿದ್ದಾರೆ.