ಸಮಸ್ಯೆಯನ್ನು ಯುಪಿಎ ಗೆದ್ದು ಬರಲಿದೆ: ಸಲ್ಮಾನ್ ಖುರ್ಷಿದ್
ನವದೆಹಲಿ: ಯುಪಿಎ-2ನೇ ಸರ್ಕಾರ ಉತ್ಕಟ ಪರಿಸ್ಥಿತಿಯಲಿಲ್ಲ. ತನಗೆ ಬಂದಿರುವ ಎಲ್ಲಾ ಸಮಸ್ಯೆಗಳಿಂದ ಗೆದ್ದು ಬರಲಿದೆ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬುಧವಾರ ಹೇಳಿದ್ದಾರೆ.
ಇಂದಿಗೆ ನಾಲ್ಕು ವರ್ಷ ಪೂರೈಸಿದ ಯುಪಿಎ-2 ಯಾವುದೇ ಉತ್ಕಟ ಪರಿಸ್ಥಿತಿಯಿಲ್ಲ. ಯುಪಿಎ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಯಶಸ್ವಿ ಕಂಡಿದೆ. ಈಗಿರುವಂತಹ ಸಮಸ್ಯೆಗಳನ್ನು ಹಿಮ್ಮೆಟಿ ಮುಂದಿನ ನಡಿಗೆಯತ್ತ ಹೆಜ್ಜೆ ಹಾಕಲಿದೆ ಎಂದು ಅವರು ಹೇಳಿದ್ದಾರೆ.
ವಿಶ್ವದಲ್ಲೇ ಭಾರತ, ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಎರಡನೇ ದೇಶ. ಇದು ಭಾರತೀಯ ಜನತಾ ಪಕ್ಷಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದಲೇ ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರ, ಹಗರಣ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸಿಲುಕಿ ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವೆಡ್ಕರ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಖುರ್ಷಿದ್, ಬಿಜೆಪಿಗೆ ಕಾಂಗ್ರೆಸ್ ಅಭಿವೃದ್ಧಿ ಸಹಿಸಿಕೊಳ್ಳಲಾಗುತ್ತಿಲ್ಲ. ಕೇವಲ ಕಾಂಗ್ರೆಸ್ನಲ್ಲಿ ಮಾತ್ರ ಸಮಸ್ಯೆಯಿಲ್ಲ, ಬಿಜೆಪಿಯಲ್ಲಿ ಸಮಸ್ಯೆಗಳು ತುಂಬಿಕೊಂಡಿವೆ ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರ ಜನರ ಬೇಡಿಕೆಗಳನ್ನು ಈಡೇರಿಸಿದೆ. ಜನರು ಹೇಳಿದಂತೆ ಸರ್ಕಾರ ನಡೆದು ಕೊಂಡಿದೆ. ಆದ್ದರಿಂದ ಬಂದಿರುವಂತಹ ಸಮಸ್ಯೆಗಳಿಂದ ಪಾರಾಗಿ ಹೊರಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.