ಸಿಎಸ್‌ಕೆ ಮಾಲೀಕರ ಸಂಬಂಧಿ ಜತೆ ಸಂಪರ್ಕವಿತ್ತು: ವಿಂದು
ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ...
ನವದೆಹಲಿ: ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ವಿಂದು ದಾರಾ ಸಿಂಗ್, ತನಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರ ಸಂಬಂಧಿಯೊಂದಿಗೆ ಸಂಪರ್ಕವಿತ್ತು ಎಂಬ ವಿಷಯವನ್ನು ಬುಧವಾರ ಒಪ್ಪಿಕೊಂಡಿದ್ದಾರೆ.
ಸಿಎಸ್‌ಕೆ ಮಾಲೀಕರ ಸಂಬಂಧಿಗೆ ವಿಂದು ಹಲವಾರು ಕರೆಗಳನ್ನು ಮಾಡಿದ್ದರ ಬಗ್ಗೆಯೂ ಅವರು ಒಪ್ಪಿಕೊಂಡಿದ್ದಾರೆ.
ಐಪಿಎಲ್ ಪಂದ್ಯಗಳ ವೇಳೆ ಸಿಎಸ್‌ಕೆ ವಿಐಪಿ ಬಾಕ್ಸ್‌ನಲ್ಲಿ ವಿಂದು ಕಾಣಿಸಿಕೊಂಡಿದ್ದು, ಸಿಎಸ್‌ಕೆ ಟೀಂ ಜತೆ ವಿಂದು ಹೇಗೆ ಆಪ್ತರಾದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಬಾಲಿವುಡ್ ನಟ ದಿವಂಗತ ದಾರಾ ಸಿಂಗ್‌ರ ಪುತ್ರನಾದ ವಿಂದು ದಾರಾ ಸಿಂಗ್ ಅವರನ್ನು ಮಂಗಳವಾರ ಬಂಧಿಸಲಾಗಿತ್ತು.
49ರ ಹರೆಯದ ವಿಂದು ರಿಯಾಲಿಟಿ ಶೋ ಬಿಗ್‌ಬಾಸ್ -3ಯ ವಿಜೇತರಾಗಿದ್ದು, ಹಲವಾರು ಬಾರಿ ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಇದು ಮಾತ್ರವ
ಲ್ಲದೆ ಪಂದ್ಯ ಮುಗಿದ ನಂತರ ನಡೆಯುವ ಪಾರ್ಟಿಗಳಲ್ಲೂ ವಿಂದು ಕಾಣಿಸಿಕೊಂಡಿದ್ದರು.