ಸ್ಪಾಟ್ ಫಿಕ್ಸಿಂಗ್ ಬೆಟ್ಟಿಂಗ್ನಲ್ಲಿ 17 ಲಕ್ಷ ಗಳಿಕೆ: ವಿಂದೂ ತಪ್ಪೊಪ್ಪಿಗೆ
ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬೆಟ್ಟಿಂಗ್...
ಮುಂಬೈ: ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬೆಟ್ಟಿಂಗ್ 17 ಲಕ್ಷ ಗಳಿಸಿರುವುದಾಗಿ ಬುಧವಾರ ತಪ್ಪೊಪ್ಪಿಕೊಂಡಿದ್ದಾರೆ.
ಇಂಡಿಯನ್ ಪ್ರೀಮೀಯರ್ ಲೀಗ್(ಐಪಿಎಲ್)ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ವಿಂದೂ ಭಾಗಿಯಾಗಿದ್ದು ಇಂದು ತಪ್ಪೋಪ್ಪಿಕೊಂಡಿದ್ದಾರೆ. ಬೆಟ್ಟಿಂಗ್ನಲ್ಲಿ 17 ಲಕ್ಷ ಗಳಿಸಲಾಗಿದೆ ಎಂದು ಪೊಲೀಸರಿಗೆ ಹೇಳಿದ್ದಾರೆ.
ವಿಚಾರಣೆ ವೇಳೆ ಬಾಯ್ಬಿಟ್ಟಿರುವ ವಿಂದೂ, ಪ್ರಸಕ್ತ ಐಪಿಎಲ್ನಲ್ಲಿ ಬೆಟ್ಟಿಂಗ್ನಿಂದ 17 ಲಕ್ಷ ಗಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ತನಿಖೆ ದಿನದ ದಿನಕ್ಕೆ ತಿರುವು ಪಡೆಯುತ್ತಿದ್ದು, ಇನ್ನೂ ಅನೇಕರು ಇದರಲ್ಲಿ ಭಾಗಿಯಾಗಿರುವುದರ ಸಂಶಯ ಬಂದಿದೆ. ಈ ಸಂಬಂಧ ಬಂಧಿತರನ್ನು ಹೆಚ್ಚಿನ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಅವರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದರು. ಬಂಧಿತ ಬುಕ್ಕಿ ರಮೇಶ್ ವ್ಯಾಸ್ ವಿಚಾರಣೆಗೊಳಪಡಿಸಿದಾಗ ವ್ಯಾಸ್ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಪಟ್ಟಿಯಲ್ಲಿ ವಿಂದೂ ಹೆಸರು ಕಂಡು ಬಂದಿತ್ತು.
ಇದಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಓ ಗುರುನಾಥ್ ಮೇಯಪ್ಪನ್, ವಿಂದೂ ಅವರಿಗೆ ತುಂಬಾ ಆಪ್ತರಾಗಿದ್ದು, ಹೆಚ್ಚು ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿರುವುದರಿಂದ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.