ಸ್ಫಾಟ್ ಫಿಕ್ಸಿಂಗ್ ಪ್ರಕರಣ: ಮುಂಬೈನಲ್ಲಿ ಪೊಲೀಸರ ದಾಳಿ
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ನಡೆದ ಸ್ಫಾಟ್ ಫಿಕ್ಸಿಂಗ್ ಹಗರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು...
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ನಡೆದ ಸ್ಫಾಟ್ ಫಿಕ್ಸಿಂಗ್ ಹಗರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಮುಂಬೈನ ಹಲವೆಡೆ ಬುಧವಾರ ದಾಳಿ ಮಾಡಿದ್ದಾರೆ.
ಇಂದು ಮುಂಬೈನಲ್ಲಿರುವ ಕ್ರಿಕೆಟಿಗ ಶ್ರೀಶಾಂತ್ ಕಂಪನಿಗಳ ಮೇಲೆ ದಾಳಿ ಮಾಡಿದ ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ದಾಳಿ ನಡೆದ ಸಂದರ್ಭದಲ್ಲಿ ದಾಖಲೆಗಳು ಲಭ್ಯವಾಗಿದ್ದು, ಬೆಟ್ಟಿಂಗ್ ಕಂಪನಿ ತೆರೆಯಲು ಶ್ರೀಶಾಂತ್ ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಕಂಪನಿಯಲ್ಲಿ ದೊರೆತ ದಾಖಲೆಗಳ ಪ್ರಕಾರ ಶ್ರೀಶಾಂತ್ ಅವರು ಈಗಾಗಲೇ ಹೈದ್ರಾಬಾದ್ನಲ್ಲಿ ಶ್ರಿ-36 ಎಂಬ ಕಂಪನಿ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಇದಲ್ಲದೇ ಶ್ರೀಶಾಂತ್ 'ಶ್ರೀ' ಎಂಬ ಹೆಸರಲ್ಲಿ ಇನ್ನು ಅನೇಕ ಕಂಪನಿ ತೆರೆಯಲು ಯೋಜನೆ ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ.