ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚೆನ್ನೈ ಸೂಪರ್ ಕಿಂಗ್ಸ್ ಸಿಇಓಗೆ ಸಮನ್ಸ್

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಅವರಿಗೆ ಮುಂಬೈ ಪೊಲೀಸರು...

Mainashree
Updated On : 23 May 2013, 5:55 am

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಅವರಿಗೆ ಮುಂಬೈ ಪೊಲೀಸರು ಗುರುವಾರ ಸಮನ್ಸ್ ಜಾರಿ ಮಾಡಿದ್ದಾರೆ.

ಹಗರಣ ಸಂಬಂಧ ಮೇಯಪ್ಪನ್ ಅವರ ವಿಚಾರಣೆಗಾಗಿ ಮುಂಬೈ ಪೊಲೀಸರ ತಂಡ ಚೆನ್ನೈಗೆ ಆಗಮಿಸಿತ್ತು. ಆದರೆ ಮೇಯಪ್ಪನ್ ಅವರು ತಮ್ಮ ನಿವಾಸದಲ್ಲಿರದಿದ್ದ ಕಾರಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ನಾಳೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯೊಳಗಾಗಿ ಕ್ರೈಂ ಬ್ರಾಂಚ್‌ಗೆ ಬಂದು ಶರಣಾಗಬೇಕು ಎಂದು ಸೂಚಿಸಿದ್ದಾರೆ.

ಇಂದು ಮದ್ಯಾಹ್ನ 2.15ರ ಸಮಯದಲ್ಲಿ ಮೂವರನ್ನೊಳಗೊಂಡ ಮುಂಬೈ ಪೊಲೀಸರ ತಂಡ ಹಾಗೂ ತಮಿಳುನಾಡು ಪೊಲೀಸರು ಮೇಯಪ್ಪನ್ ನಿವಾಸಕ್ಕೆ ತೆರಳಿದ್ದಾರೆ. ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಮತ್ತು ಅವರ ಅಳಿಯ ಮನೆಯಲ್ಲಿರಲಿಲ್ಲ. ಮೇಯಪ್ಪನ್ ಭೇಟಿಗಾಗಿ 20 ನಿಮಿಷಗಳ ಕಾಲ ಕಾದ ನಂತರ ಸಮನ್ಸ್ ಜಾರಿ ಮಾಡಿ, ಪೊಲೀಸರು ಹಿಂದಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಗುರುನಾಥ್ ಅವರದ್ದೂ ಕೈವಾಡವಿದೆ ಎಂದು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ವಿಂದೂ ದಾರಾಸಿಂಗ್ ಹೇಳಿಕೆ ಮೇರೆಗೆ ಮುಂಬೈ ಪೊಲೀಸರು ಗುರುನಾಥ್ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ.

ತಮ್ಮ ಹೆಸರು ಹಗರಣದಲ್ಲಿ ಕೇಳಿಬಂದಾಗಿನಿಂದಲೂ ಗುರುನಾಥ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement