ಪ್ರಮುಖ ಎಲ್ಈಟಿ ಉಗ್ರನ ಹತ್ಯೆ
ಕಾಶ್ಮೀರದ ಪಟ್ಟನ್ನ್ ಮತ್ತು ಸೊಪೋರ್ನಲ್ಲಿ ಬಾಂಬ್ ಸ್ಫೋಟಿಸಿ ಅನೇಕ ಜನರ ಸಾವಿಗೆ ಕಾರಣವಾಗಿದ್ದ ಉಗ್ರ ಹಿಲಾಲ್...
ಶ್ರೀನಗರ್: ಕಾಶ್ಮೀರದ ಉತ್ತರ ಭಾಗದಲ್ಲಿರುವ ಪಟ್ಟನ್ನ್ ಮತ್ತು ಸೊಪೋರ್ನಲ್ಲಿ ಬಾಂಬ್ ಸ್ಫೋಟಿಸಿ ಅನೇಕ ಜನರ ಸಾವಿಗೆ ಕಾರಣವಾಗಿದ್ದ ಪ್ರಮುಖ ಎಲ್ಈಟಿ ಉಗ್ರ ಹಿಲಾಲ್ ಮೋಲ್ವಿಯನ್ನು ಗುರುವಾರ ಪೊಲೀಸರು ಹತ್ಯೆ ಮಾಡಿದ್ದಾರೆ.
ಹತ ಉಗ್ರನನ್ನು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಮುಖಂಡ ಹಿಲಾಲ್ ಮೋಲ್ವಿ ಎಂದು ಗುರುತಿಸಲಾಗಿದೆ.
ಶ್ರೀನಗರದ ಫಟೆಹಕದಲ್ ಪ್ರದೇಶದಲ್ಲಿ ಉಗ್ರನು ಅಡಗಿದ್ದಾಗ ಪೊಲೀಸರು ದಾಳಿ ಮಾಡಿ ಕೊಂದಿದ್ದಾರೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಪೇದೆಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಇಟಿ ಮುಖಂಡ ಅಡಗಿದ್ದ ಮನೆಗೆ ಮುತ್ತಿಗೆ ಹಾಕಲು ಪೊಲೀಸರು ಹೊರಟಾಗ ಉಗ್ರರು ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಉಗ್ರರ ಮುಖಂಡ ಸಾವನ್ನಪ್ಪಿದ್ದು, ಪೊಲೀಸರು ಗಾಯಗೊಂಡಿದ್ದಾರೆ.
ಕಳೆದ ಎರಡು ತಿಂಗಳಿಂದ ಬಾರಮುಲ್ಲಾ ಜಿಲ್ಲೆಯ ಪಟ್ಟನ್ ನಗರದಲ್ಲಿ ಉಗ್ರರ ಪೂರ್ಣ ಭದ್ರತೆಯೊಂದಿಗೆ ಮೋಲ್ವಿ ಆಶ್ರಯ ಪಡೆದಿದ್ದನು ಎಂದು ಮೂಲಗಳು ತಿಳಿಸಿವೆ.