ಫಿಕ್ಸಿಂಗ್: ಆಂಪೈರ್ ಅಸಾದ್ ವಿರುದ್ಧ ಐಸಿಸಿ ಕ್ರಮ
ಮುಂಬೈ: ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ಆಂಪೈರ್ ಅಸಾದ್ ರೌಫ್ ಅವರನ್ನು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಗುರುವಾರ ಹೊರ ಹಾಕಿದೆ.
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ವಿವಾದಿತ ಪಾಕಿಸ್ತಾನದ ಆಂಪೈರ್ ಅಸಾದ್ ರೌಫ್ ಅವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಐಸಿಸಿ ಕ್ರಮ ಕೈಗೊಂಡಿದೆ.
ಜೂ.6ರಂದು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಐಪಿಎಲ್ ಸ್ಪಾಟ್ ಹಗರಣದಲ್ಲಿ ಅಸಾದ್ ಹೆಸರು ಕೇಳಿ ಬಂದಿದೆ. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಗರಣದಲ್ಲಿ ಅಸಾದ್ ಹೆಸರಿರುವುದು ಐಸಿಸಿ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಇಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಅಸಾದ್ ಅವರಿಗೆ ಬುಕ್ಕಿಗಳೊಡನೆ ಸಂಪರ್ಕವಿದ್ದು, ಅವರಿಂದ ಉಡುಗೊರೆಯನ್ನು ಸ್ವೀಕರಿಸಿದ್ದಾರೆ ಹಾಗೂ ನಟ ವಿಂದೂ ದಾರಾ ಸಿಂಗ್ ಅವರೊಡನೆ ಹೆಚ್ಚಾಗಿ ಸಂಪರ್ಕದಲ್ಲಿದ್ದರು ಎಂದು ತಿಳಿದು ತನಿಖೆಯಿಂದ ತಿಳಿದು ಬಂದಿದೆ.