ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂಜಯ್ ದತ್ ಕೈದಿ ನಂಬರ್ 16656

ಮುಂಬೈ ಸರಣಿ ಸ್ಫೋಟದ ದೋಷಿ ಸಂಜಯ್‌ದತ್ ಇನ್ಮುಂದೆ ಪುಣೆಯ ಯರವಾಡಾ ಜೈಲಿನಲ್ಲಿ ಕೈದಿ ನಂಬರ್ 16656...

Rashmi Kasaragodu
Updated On : 23 May 2013, 1:03 am

ಮುಂಬೈ:  ಮುಂಬೈ ಸರಣಿ ಸ್ಫೋಟದ ದೋಷಿ ಸಂಜಯ್‌ದತ್ ಇನ್ಮುಂದೆ ಪುಣೆಯ ಯರವಾಡಾ ಜೈಲಿನಲ್ಲಿ ಕೈದಿ ನಂಬರ್ 16656 ಎಂದು ಕರೆಯಲ್ಪಡಲಿದ್ದಾರೆ.

53ರ ಹರೆಯದ ದತ್ ಇನ್ನು ಮುಂದಿನ 42 ತಿಂಗಳುಗಳ ಕಾಲ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸಲಿದ್ದಾರೆ. ಮುಂಬೈಯ ಅರ್ಥರ್ ರೋಡ್ ಜೈಲಿನಲ್ಲಿದ್ದ ದತ್ ಅವರನ್ನು ಕಳೆದ ರಾತ್ರಿ ಅತ್ಯಂತ ರಹಸ್ಯವಾಗಿ ಯರವಾಡ ಜೈಲಿಗೆ ಸ್ಥಳಾಂತರಿಸಲಾಗಿದೆ.

ಕಳೆದ ಬಾರಿ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ದತ್, ಕೈದಿಯಾಗಿ ಬಡಗಿ ಕೆಲಸ ಮಾಡಿದ್ದರು. ಈ ಬಾರಿ ಅವರು ಇತರ ಕೈದಿಗಳ ಜತೆ ಇನ್ನಿತರ ಕೆಲಸಗಳನ್ನು ಮಾಡುವ ಸಾಧ್ಯತೆಯಿದೆ. ಜೈಲಿನಲ್ಲಿ ದತ್‌ಗೆ ತಿಂಗಳಿಗೆ 1500 ರು. ಭತ್ಯೆ ನೀಡಲಾಗುವುದು. ದತ್ ಅವರು ತಮ್ಮ ಸಂದರ್ಶಕರನ್ನು ತಿಂಗಳಲ್ಲಿ ಒಂದೇ ಬಾರಿ ಭೇಟಿಯಾಗಬಹುದು ಹಾಗು ಈ ಭೇಟಿಯ ಕಾಲಾವಕಾಶ 20 ನಿಮಿಷ.

1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದಲ್ಲಿ ದೋಷಿ ಎಂದು ಹೇಳಿದ ಸುಪ್ರೀಂ ಕೋರ್ಟ್ ದತ್ ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 20 ವರ್ಷಗಳ ಹಿಂದೆ ದತ್  18 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ, ಬಾಕಿ ಉಳಿದ 42 ತಿಂಗಳುಗಳ ಶಿಕ್ಷೆಯನ್ನು ಇದೀಗ ಅನುಭವಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement