ಅತ್ಯಾಚಾರ ಪ್ರಕರಣ: ಎಸ್ಪಿ ನಾಯಕನ ಪುತ್ರನಿಗೆ ಜೀವಾವಧಿ
ಬದೌನ್: ಅಪ್ರಾಪ್ತೆ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ, ಸಮಾಜವಾದಿ ಪಕ್ಷದ ಮುಖಂಡನ ಪುತ್ರನಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಮಾಜವಾದಿ ಪಕ್ಷದ ಮುಖಂಡ ಪತಾಂಜಲಿ ಭಾರದ್ವಾಜ್ರ ಪುತ್ರ ವರುಣ್ ಭಾರದ್ವಾಜ್ಗೆ ಗುರುವಾರ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.
2010ರ ಡಿಸೆಂಬರ್ 27ರಂದು 15 ವರ್ಷದ ಹುಡುಗಿಯ ಮೇಲೆ ವರುಣ್ ಭಾರದ್ವಾಜ್ ಅತ್ಯಾಚಾರವೆಸಗಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಮೂರ್ತಿ ಎಸ್ಎನ್ ತ್ರಿಪಾಠಿ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದು, ಅಪರಾಧಿ ಅತ್ಯಾಚಾರಕ್ಕೊಳಗಾದ ಯುವತಿಗೆ 70 ಸಾವಿರ ದಂಡ ನೀಡಬೇಕು ಎಂದು ಸೂಚಿಸಿದ್ದಾರೆ.