ಗುರುನಾಥ್ಗೆ ಬುಕ್ಕಿಗಳೊಂದಿಗೆ ಸಂಪರ್ಕವಿದೆ: ಶ್ರೀನಿವಾಸನ್ ಪುತ್ರ ಅಶ್ವಿನ್ ಆರೋಪ
ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಅಳಿಯ...
ಬೆಂಗಳೂರು: ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಅವರು ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶ್ರೀನಿವಾಸನ್ ಅವರ ಪುತ್ರ ಅಶ್ವಿನ್ ಆರೋಪಿಸಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಇಂದೇ ವಿಚಾರಣೆಗೆ ಹಾಜರಾಗುವಂತೆ ಗುರನಾಥ್ ಮೇಯಪ್ಪನ್ ಅವರಿಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ ನಂತರ ಮಾಧ್ಯಮಕ್ಕೆ ಮಾತನಾಡಿರುವ ಅಶ್ವಿನ್, ಐಪಿಎಲ್ ಆರಂಭಕ್ಕೂ ಮುನ್ನವೇ ಗುರುನಾಥ್ ಅವರಿಗೆ ಚೆನ್ನೈ ಹಾಗೂ ದುಬೈ ಮೂಲದ ಬುಕ್ಕಿಗಳೊಂದಿಗೆ ಸಂಪರ್ಕವಿದೆ ಎಂದು ಹೇಳಿದ್ದಾರೆ. ಅಲ್ಲದೆ ಗುರನಾಥ್ ಮೇಯಪ್ಪನ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವುದು ನಿಜ ಎಂದು ಆರೋಪಿಸಿದ್ದಾರೆ.
ನಮ್ಮ ತಂದೆ ಚಿಕ್ಕ ಏರ್ಕ್ರಾಫ್ಟ್ ಹೊಂದಿದ್ದಾರೆ. ಅದಕ್ಕೆ ಇಂಧನ ತುಂಬಿಸುವ ನೆಪದಲ್ಲಿ ದುಬೈಗೆ ತೆರಳುತ್ತಿದ್ದ ಗುರುನಾಥ್, ಅಲ್ಲಿಯ ಬುಕ್ಕಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು ಬೆಟ್ಟಿಂಗ್ ಅನ್ನು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ ಎಂದು ಅಶ್ವಿನ್ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ ತಂದೆ ಶ್ರೀನಿವಾಸನ್ ಹಾಗೂ ಭಾವ ಗುರುನಾಥ್ ಅವರ ಫ್ಯಾಮಿಲಿ ಪುರಾಣ ಹೇಳಿದೆ ಅಶ್ವಿನ್, ಗುರು ಚೆಟ್ಟಿಯಾರ್ ಸಮುದಾಯದರು, ನಾವು ಬ್ರಾಹ್ಮಣರು. ನನ್ನ ತಂಗಿ ರೂಪಾ ಹಾಗೂ ಗುರು ಡೇಟಿಂಗ್ ಮಾಡುತ್ತಿದ್ದರು ಎಂದು ತಮ್ಮ ಭಾವನ ಪ್ರೇಮ ಪುರಾಣ ಬಿಚ್ಚಿಟ್ಟಿದ್ದಾರೆ.
ರೂಪಾ ಹಾಗೂ ಗುರು ನಡುವಿನ ಡೇಟಿಂಗ್ ವಿಷಯ ನಮ್ಮ ಕುಟುಂಬಕ್ಕೆ ಗೊತ್ತಿತ್ತು. ಇದಕ್ಕೆ ಅಮ್ಮ ಒಪ್ಪಿರಲಿಲ್ಲ. ನನ್ನ ತಾಯಿಯ ಬೆದರಿಕೆಗೂ ತಂಗಿ ರೂಪಾ ಜಗ್ಗಲಿಲ್ಲ. ಕೊನೆಗೂ ನಮ್ಮ ತಂದೆ ಶ್ರೀನಿವಾಸನ್ ಮದುವೆಗೆ ಒಪ್ಪಿದರು ಎಂದು ಹೇಳಿದ್ದಾರೆ.
ನನ್ನ ತಂಗಿ ರೂಪಾ ಈಗ ಇಂಡಿಯಾ ಸಿಮೆಂಟ್ಸ್ನ ನಿರ್ದೇಶಕಿಯಾಗಿದ್ದಾರೆ. ಗುರುನಾಥ್ ಹಂತ ಹಂತವಾಗಿ ನಮ್ಮ ತಂದೆಯ ವ್ಯಾಪಾರ ಸಾಮ್ರಾಜ್ಯ ಅಕ್ರಮಿಸಿಕೊಂಡರು ಎಂದು ಅಶ್ವಿನ್ ತಿಳಿಸಿದ್ದಾರೆ.