ನಾನು ನನ್ನ ತಾಯಿಯಂತೆ ಮೃದುವಲ್ಲ: ರಾಹುಲ್
ನವದೆಹಲಿ: 'ನಾನು ನನ್ನ ತಾಯಿಯಂತೆ ಮೃದುವಲ್ಲ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ಮಾತನ್ನಾಡಿದ್ದಾರೆ.
ನನ್ನ ತಾಯಿ ಸೋನಿಯಾ ಗಾಂಧಿ ಅವರಂತೆ ಮೃದುವಾಗಿರುವುದಿಲ್ಲ, ಪಕ್ಷದಲ್ಲಿ ಅಶಿಸ್ತು ಮತ್ತು ಅಕ್ರಮ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಯೋಚಿಸುವುದಿಲ್ಲ ಎಂದು ಪಕ್ಷದ ನಾಯಕರಿಗೆ ಎಚ್ಚರಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ ಸಂದರ್ಭದಲ್ಲಿ ರಾಹುಲ್ ತಮ್ಮ ದೃಢ ನಿಲುವು ಕುರಿತು ನಾಯಕರಲ್ಲಿ ಚರ್ಚಿಸಿದ್ದು, ಪರೋಕ್ಷವಾಗಿ ಮೃದು ಸ್ವಭಾವದವನಲ್ಲ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದ ನವೆಂಬರ್ನಲ್ಲಿ ದೆಹಲಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಕುರಿತು ಪಕ್ಷದ ಕಾರ್ಯಚಟುವಟಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾಯಕತ್ವ ಹೇಗಿರಬೇಕು ಹಾಗೂ ಸರ್ಕಾರದಿಂದ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ.