ಪಾಕ್ನಿಂದ 45 ಭಾರತೀಯ ಮೀನುಗಾರರು ಬಿಡುಗಡೆ ?
ಇಸ್ಲಾಮಾಬಾದ್: 45 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಶುಕ್ರವಾರ ಬಿಡುಗಡೆ ಮಾಡಿದ್ದು, ಈ ಸಂಬಂಧ ಭಾರತೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಕರಾಚಿ ಜೈಲಿನಿಂದ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ್ದು, ಅವರನ್ನು ಲಾಹೋರ್ನ ಪೂರ್ವದಲ್ಲಿರುವ ನಗರವೊಂದಕ್ಕೆ ಬಸ್ನಲ್ಲಿ ಕಳುಹಿಸಲಾಗಿದೆ. ಈ ಸಂಬಂಧ ಪಾಕಿಸ್ತಾನದ ಅಧಿಕಾರಿಗಳು ಭಾರತದ ಉನ್ನತ ಆಯೋಗಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.
ಜೈಲುಶಿಕ್ಷೆ ಪೂರ್ಣಗೊಳ್ಳವುದಕ್ಕೂ ಮುನ್ನ ಕೆಲ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ನಾಳೆ ಗಡಿ ಭಾಗದ ನಿಯಮಾನುಷ್ಠಾನ ಪೂರ್ಣಗೊಳ್ಳಲಿದ್ದು, ಭಾರತೀಯ ಮೀನುಗಾರರು ಗಡಿ ದಾಟಿ ಸ್ವದೇಶಕ್ಕೆ ಮರಳಲಿದ್ದಾರೆ.
ಈಗಾಗಲೇ ಮೀನುಗಾರರನ್ನು ಕರಾಚಿ ಜೈಲಿನಿಂದ ಬಿಡುಗಡೆ ಮಾಡಿ, ಬಸ್ನಲ್ಲಿ ಹೊರಟಿದ್ದನ್ನು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿವೆ.
ಪಾಕಿಸ್ತಾನದ ಜೈಲಿನಲ್ಲಿ 482 ಮೀನುಗಾರಿದ್ದು, ಅವರ ಶಿಕ್ಷಾವಧಿ ಪೂರ್ಣಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.