ಮೇಯಪ್ಪನ್ ಚೆನ್ನೈ ಸೂಪರ್ ಕಿಂಗ್ಸ್ ಸಿಇಓ ಅಲ್ಲ: ಇಂಡಿಯಾ ಸಿಮೆಂಟ್ಸ್
ಚೆನ್ನೈ: ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)ಯ ಸಿಇಓ ಅಲ್ಲ, ಮಾಲಿಕನು ಅಲ್ಲ ಎಂದು ಮಾಲಿಕರಾದ ಇಂಡಿಯಾ ಸಿಮೆಂಟ್ಸ್ ಶುಕ್ರವಾರ ಹೇಳಿದೆ.
ಗುರುನಾಥ್ ಮೇಯಪ್ಪನ್ ಸಿಎಸ್‌ಕೆ ಆಡಳಿತ ಮಂಡಳಿಯ ಸದಸ್ಯರಾಗಿದ್ದರು ಎಂದು ಇಂಡಿಯಾ ಸಿಮೆಂಟ್ಸ್‌ನ ಕಾರ್ಯಾಧ್ಯಕ್ಷ ಎಸ್ ರಘುಪತಿ ಹೇಳಿದ್ದಾರೆ.
ಮೇಯಪ್ಪನ್ ಇಂಡಿಯಾ ಸಿಮೆಂಟ್ಸ್ ನಿರ್ವಹಣಾ ನಿರ್ದೇಶಕ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಅಳಿಯರಾಗಿದ್ದರು. ಅವರು ಕೇವಲ ಸದಸ್ಯರಷ್ಟೆ ಎಂದು ಹೇಳಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ನಡೆಸುತ್ತಿರುವ ತನಿಖೆಗೆ ಇಂಡಿಯಾ ಸಿಮೆಂಟ್ಸ್ ಪೂರ್ಣವಾಗಿ ಸಹಕರಿಸಲಿದೆ. ಕಂಪನಿ ಸದಸ್ಯರು ಹಗರಣದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಗುರುನಾಥ್ ಅವರದ್ದೂ ಕೈವಾಡವಿದೆ ಎಂದು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ವಿಂದೂ ದಾರಾಸಿಂಗ್ ಹೇಳಿಕೆ ನೀಡಿದ್ದರು.