ರಕ್ಷಣಾ ಇಲಾಖೆ ನೂತನ ಕಾರ್ಯದರ್ಶಿ ಆರ್.ಕೆ. ಮಾಥುರ್
ನವದೆಹಲಿ: ಕೇಂದ್ರ ರಕ್ಷಣಾ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ಆರ್.ಕೆ. ಮಾಥುರ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ರಾಧಾಕೃಷ್ಣ ಮಾಥುರ್ ಅವರು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಉತ್ತನ ಹುದ್ದೆಗಳನ್ನು ಅಲಂಕರಿಸಿದ್ದರು. ಹೀಗಾಗಿ ಅವರನ್ನು ರಕ್ಷಣಾ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
1977ರ ಅವಧಿಯಲ್ಲಿ ಮಣಿಪುರ-ತ್ರಿಪುರ ಕೆಡಾರ್‌ನ ಐಎಎಸ್ ಅಧಿಕಾರಿಯಾದ ಮಾಥುರ್, ಉತ್ತಮ ಆಡಳಿತ ದಕ್ಷತೆ ಹೊಂದಿದ್ದಾರೆ. ಅಲ್ಲದೆ ಅವರು ರಕ್ಷಣಾ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹಾಗೂ ವಿಶೇಷ ಕಾರ್ಯದರ್ಶಿಯಾಗಿ ಸಹ ಅಧಿಕಾರ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.