ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕ್ಸಲರ ಪ್ರಧಾನ ಗುರಿ ಮಹೇಂದ್ರ ಕರ್ಮಾ ಆಗಿದ್ದರು!

ಛತ್ತೀಸ್ ಗಡದಲ್ಲಿ ಕಾಂಗ್ರೆಸ್‌ನ ಪರಿವರ್ತನಾ ರ್ಯಾಲಿಯಲ್ಲಿ ದಾಳಿ ನಡೆಸಿದ ನಕ್ಸಲರ ಪ್ರಧಾನ ಗುರಿ ನಕ್ಸಲ್ ವಿರೋಧಿ ಸಲ್ವಾ ಜುದಮ್...

Rashmi Kasaragodu
Updated On : 26 May 2013, 6:39 am

ಸುಖ್ಮಾ (ಛತ್ತೀಸ್ ಗಡ):  ಛತ್ತೀಸ್ ಗಡದಲ್ಲಿ ಕಾಂಗ್ರೆಸ್‌ನ ಪರಿವರ್ತನಾ ರ್ಯಾಲಿಯಲ್ಲಿ ದಾಳಿ ನಡೆಸಿದ ನಕ್ಸಲರ ಪ್ರಧಾನ ಗುರಿ ನಕ್ಸಲ್ ವಿರೋಧಿ ಸಲ್ವಾ ಜುದಮ್ ಚಳುವಳಿಯ ಸ್ಥಾಪಕ ಮಹೇಂದ್ರ ಕರ್ಮಾ ಆಗಿದ್ದರು ಎಂದು ದಾಳಿಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಮಹೇಂದ್ರ ಕರ್ಮಾ ಅವರನ್ನು ಬಂಧಿಸಿದಾಗ, ನಕ್ಸಲರು ಸಂತೋಷದಿಂದ ಕುಣಿದಾಡಿದ್ದರು. ಕರ್ಮಾ ಅವರನ್ನು ಬಂಧಿಸುವ ಮುನ್ನ ಅವರ ಕಾರಿಗೆ ನಾಲ್ಕು ಸಾರಿ ಗುಂಡಿನ ಸುರಿಮಳೆಗೈದಿದ್ದಾರೆ. ಕಾರಿನಲ್ಲಿರುವುದು ಕರ್ಮಾ ಎಂದು ತಿಳಿದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಕರ್ಮಾ ಅವರು ಗುಂಡಿನ ದಾಳಿಗೆ ಸಿಕ್ಕಿ ಕುಸಿದು ಬಿದ್ದಾಗ, ಕೋವಿಯ ಈಟಿಯಿಂದ ಅವರ ತಲೆಯನ್ನು ಚುಚ್ಚಿ ಛಿದ್ರಗೊಳಿಸಿದ್ದಾರೆ.

ಅದೇ ವೇಳೆ ವಿಪಕ್ಷ ನಾಯಕ ನಂದ ಕುಮಾರ್ ಪಟೇಲ್ ಮತ್ತು ಅವರ ಪುತ್ರ ದಿನೇಶ್ ಅವರನ್ನು ಅಪಹರಿಸಿ ನಂತರ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

ನಕ್ಸಲರು ತಾವು ಬಂಧಿಸಿದ ವ್ಯಕ್ತಿಗಳನ್ನು ನೆಲದಲ್ಲಿ ಮಲಗಿಸಿ ಅವರ ಕಾಲಿಗೆ ಗುಂಡಿಕ್ಕಿ ನಂತರ ಓಡುವಂತೆ ಹೇಳಿದ್ದಾರೆ. ಜನರು ಈ ರೀತಿ ಓಡುತ್ತಿದ್ದಾಗ ಒಬ್ಬರ ನಂತರ ಒಬ್ಬರ ಮೇಲೆ ಗುಂಡು ಹಾರಿಸಿ ಬರ್ಬರ ರೀತಿಯಲ್ಲಿ ಕೊಲೆಗೈದಿದ್ದಾರೆ ಎಂದು ಪ್ರತ್ಯಕ್ಷದರ್ಶಿ ನಕ್ಸಲರ ರೌದ್ರಾವತಾರದ ಬಗ್ಗೆ ವಿವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement