ನಕ್ಸಲರ ಮುಂದೆ ತಲೆಬಾಗಲ್ಲ: ಪ್ರಧಾನಿ
ಛತ್ತೀಸ್ ಗಡ ದಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಡೆದ ಭೀಕರ ನಕ್ಸಲ್ ದಾಳಿಯನ್ನು ಖಂಡಿಸಿದ ಪ್ರಧಾನಿ...
ರಾಯ್ಪುರ್:ಛತ್ತೀಸ್ ಗಡದಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ನಾಯಕರುಮತ್ತು ಕಾರ್ಯಕರ್ತರಮೇಲೆ ನಡೆದಭೀಕರ ನಕ್ಸಲ್ದಾಳಿಯನ್ನು ಖಂಡಿಸಿದ ಪ್ರಧಾನಿ ಮನ್‌ಮೋಹನ್ ಸಿಂಗ್ನಾವು ಎಂದಿಗೂನಕ್ಸಲರಿಗೆ ತಲೆಬಾಗಲ್ಲ ಎಂದು ಹೇಳಿದ್ದಾರೆ.
ನಕ್ಸಲರ ಈ ಕೃತ್ಯದಿಂದಾಗಿನಕ್ಸಲರ ವಿರುದ್ಧಹೋರಾಟ ಇನ್ನೂತೀವ್ರವಾಗಲಿದೆ ಎಂದು ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆಮಾತನಾಡಿದ ಪ್ರಧಾನಿ ನಕ್ಸಲರ ಅಟ್ಟಹಾಸವನ್ನು ಬುಡಸಮೇತ ಕಿತ್ತೊಗೆಯಬೇಕೆಂದುಹೇಳಿದ್ದಾರೆ.
ಶನಿವಾರ ನಡೆದ ನಕ್ಸಲರದಾಳಿಯನ್ನು ತೀವ್ರವಾಗಿ ಖಂಡಿಸಿದ ಸಿಂಗ್, ಈದಾಳಿಯಲ್ಲಿ ಹತರಾದವರು ಪ್ರಜಾಪ್ರಭುತ್ವದಹೋರಾಟದಲ್ಲಿ ಹುತಾತ್ಮರಾಗಿದ್ದಾರೆ ಎಂದುಹೇಳಿದ್ದಾರೆ.
ಅದೇ ವೇಳೆ ದಾಳಿಯಲ್ಲಿಅಸುನೀಗಿದ ವ್ಯಕ್ತಿಗಳ ಕುಟುಂಬಗಳಿಗೆಪ್ರಧಾನಿಯವರ ದೇಶೀಯ ಪರಿಹಾರ ನಿಧಿಯಿಂದ 5ಲಕ್ಷ ರು.ಪರಿಹಾರ ಧನನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ.
ನಕ್ಸಲ್ ದಾಳಿಯಲ್ಲಿ ಮರಣಹೊಂದಿದ ಹಾಗುಗಾಯಗೊಂಡಿರುವ ವ್ಯಕ್ತಿಗಳ ಕುಟುಂಬಕ್ಕೆಸಾಂತ್ವನ ಹೇಳುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷೆಸೋನಿಯಾ ಗಾಂಧಿಮತ್ತು ಪ್ರಧಾನಿಭಾನುವಾರ ರಾಯ್ಪುರಕ್ಕೆ ಆಗಮಿಸಿದ್ದರು.
ಶನಿವಾರ ನಡೆದ ನಕ್ಸಲ್ದಾಳಿಯಲ್ಲಿ ಕಾಂಗ್ರೆಸ್‌ನ ಹಿರಿಯ ನೇತಾರರಾದ ನಂದಕುಮಾರ್ ಪಟೇಲ್,ಮಹೇಂದ್ರ ಕರ್ಮ ಸೇರಿದಂತೆ 27 ಮಂದಿಸಾವನ್ನಪ್ಪಿದ್ದರು. ಅದೇ ವೇಳೆಹಲವಾರು ಮಂದಿಗೆಗಾಯಗಳಾಗಿದ್ದವು.
ಘಟನೆಯನ್ನು ಖಂಡಿಸಿದ ಸೋನಿಯಾಗಾಂಧಿ, ತಾನು ಛತ್ತೀಸ್‌ಗಡದ ಕಾಂಗ್ರೆಸ್ ನಾಯಕರ ಧೈರ್ಯವನ್ನು ಮೆಚ್ಚುತ್ತೇನೆಎಂದು ಹೇಳಿದ್ದಾರೆ.