ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕ್ಸಲ್ ದಾಳಿ: ಸಾವಿನ ಸಂಖ್ಯೆ 27ಕ್ಕೇರಿಕೆ

ಛತ್ತೀಸ್‌ ಗಡದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ರ್ಯಾಲಿಯಲ್ಲಿ ದಾಳಿ ನಡೆಸಿದ ನಕ್ಸಲರು ಛತ್ತೀಸ್‌ ಗಡ ಕಾಂಗ್ರೆಸ್ ಕಮಿಟಿ ಮುಖ್ಯಸ್ಥ ನಂದ ಕುಮಾರ್ ಪಟೇಲ್ ...

Rashmi Kasaragodu
Updated On : 26 May 2013, 3:38 am

ರಾಯ್ಪುರ್:ಛತ್ತೀಸ್‌ ಗಡದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ರ್ಯಾಲಿಯಲ್ಲಿ ದಾಳಿ ನಡೆಸಿದ ನಕ್ಸಲರು ಛತ್ತೀಸ್‌ ಗಡ ಕಾಂಗ್ರೆಸ್ ಕಮಿಟಿ ಮುಖ್ಯಸ್ಥ ನಂದ ಕುಮಾರ್ ಪಟೇಲ್ ಮತ್ತು ಅವರ ಪುತ್ರರನ್ನು ಅಪಹರಿಸಿ ಹತ್ಯೆಗೈದಿದ್ದಾರೆ.

ಶನಿವಾರ ರಾತ್ರಿ ಕಾಂಗ್ರೆಸ್‌ನ ಪರಿವರ್ತನಾ ರ್ಯಾಲಿಯಲ್ಲಿ ಗುಂಡಿನ ಸುರಿಮಳೆಗೈದ ನಕ್ಸಲರು ಪಟೇಲ್ ಮತ್ತು ಅವರ ಪುತ್ರ ದಿನೇಶ್‌ನ್ನು ಅಪಹರಿಸಿದ್ದರು. ಭಾನುವಾರ ಬೆಳಗ್ಗೆ ಪಟೇಲ್ ಮತ್ತು ಅವರ ಪುತ್ರನ ಮೃತದೇಹ ರಕ್ತಸಿಕ್ತವಾಗಿ ಬಸ್ಟಾರ್‌ನ ಜೀರಾಮ್ ಕಣಿವೆಯಲ್ಲಿ ಪತ್ತೆಯಾಗಿದೆ.

ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27ಕ್ಕೇರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದಾಗ್ಯೂ, ಪ್ರಸ್ತುತ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ನಕ್ಸಲರ ವಿರುದ್ಧದ ಕಾರ್ಯಾಚರಣೆಗೆ ತಡೆಯುಂಟಾಗಿದೆ.

ನಿನ್ನೆ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ  ಕಾಂಗ್ರೆಸ್‌ನ ಹಿರಿಯ ನೇತಾರ, ಸಲ್ವಾ ಜುದಮ್ ನಾಯಕ ಮಹೇಂದ್ರ ಕರ್ಮಾ ಹಾಗು ಕಾಂಗ್ರೆಸ್‌ನ ಮಾಜಿ ಶಾಸಕ ಉದಯ ಮುದಲಿಯಾರ್ ಅವರನ್ನೂ ನಕ್ಸಲರು ಗುಂಡಿಕ್ಕಿ ಹತ್ಯೆಗೈದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement