ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಪಾಟ್ ಫಿಕ್ಸಿಂಗ್: ಬಿಸಿಸಿಐ ಇಂದ ತನಿಖಾ ತಂಡ ರಚನೆ

ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣಗಳ ತನಿಖೆ ನಡೆಸುವ ಸಲುವಾಗಿ ಬಿಸಿಸಿಐ ಭಾನುವಾರ ಮೂವರು ಸದಸ್ಯರ...

Rashmi Kasaragodu
Updated On : 26 May 2013, 6:38 am

ಕೊಲ್ಕತ್ತಾ: ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣಗಳ ತನಿಖೆ ನಡೆಸುವ ಸಲುವಾಗಿ ಬಿಸಿಸಿಐ ಭಾನುವಾರ ಮೂವರು ಸದಸ್ಯರ ತನಿಖಾ ಸಮಿತಿಯೊಂದನ್ನು ರಚಿಸಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಒಪ್ಪದ ಶ್ರೀನಿವಾಸನ್, ಪ್ರಸ್ತುತ ಸಮಿತಿಯನ್ನು ಕ್ಷಿಪ್ರವಾಗಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಬಿಸಿಸಿಐ ಶಿಸ್ತು ಸಮಿತಿಯ ಐವರು ಸದಸ್ಯರಲ್ಲಿ ಇಬ್ಬರು ಸದಸ್ಯರು ಈ ಸಮಿತಿಯಲ್ಲಿದ್ದಾರೆ ಎಂದು ಶ್ರೀನಿವಾಸನ್ ಹೇಳಿದ್ದಾರೆ. ಸಂಜಯ್ ಜಗ್ದ್ದಲೆ, ಅಜಯ್ ಶಿರ್ಖೆ, ಅರುಣ್ ಜೇಟ್ಲಿ, ರಾಜೀವ್ ಶುಕ್ಲಾ ಮತ್ತು ರವಿ ಶಾಸ್ತ್ರಿ ಆ ಐದು ಸದಸ್ಯರಾಗಿದ್ದಾರೆ.

ಮೂರನೇ ಸದಸ್ಯ ಬಿಸಿಸಿಐಯಿಂದ ಹೊರಗಿರುವ ಸ್ವತಂತ್ರ ಸದಸ್ಯನಾಗಿದ್ದಾನೆ.

ಅದೇ ವೇಳೆ ತಾನು ಈ ಸಮಿತಿಯ ಭಾಗವಾಗಿರುವುದಿಲ್ಲ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement