ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕ್ಸಲ್ ದಾಳಿ: ತನಿಖೆ ಕೈಗೊಂಡ ಎನ್‌ಐಎ

ಛತ್ತೀಸ್‌ಗಡ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯಾ ತನಿಖಾ ದಳ(ಎನ್‌ಐಎ) ತನಿಖೆ ನಡೆಸುವಂತೆ ಗೃಹ ಇಲಾಖೆ ಸೋಮವಾರ ಆದೇಶಿಸಿದೆ...

Vishwanath S
Updated On : 27 May 2013, 3:00 am

ನವದೆಹಲಿ: ಛತ್ತೀಸ್‌ಗಡ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯಾ ತನಿಖಾ ದಳ(ಎನ್‌ಐಎ)ದ ತನಿಖೆಗೆ ಕೇಂದ್ರ ಗೃಹ ಇಲಾಖೆ ಸೋಮವಾರ ಆದೇಶಿಸಿದೆ.

ಈ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರು ಎನ್‌ಐಎ ತನಿಖೆಗೆ ಆದೇಶಿಸಿದ್ದು, ಕೂಡಲೆ ಘಟನೆಯ ತನಿಖಾ ವರದಿ ನೀಡುವಂತೆ ಸೂಚಿಸಿದ್ದಾರೆ.

ದಾಳಿ ಸಂಬಂಧ ತನಿಖೆ ಕೈಗೊಂಡಿರುವ ಎನ್‌ಐಎ ಇಂದು ಛತ್ತೀಸ್‌ಗಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ನಿನ್ನೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ನಕ್ಸಲರ ದಾಳಿ ಪ್ರಕರಣದ ತನಿಖೆ ಎನ್‌ಐಎ ನಡೆಸಲಿದೆ ಎಂದಿದ್ದರು. ಇದಕ್ಕೆ ಛತ್ತೀಸ್‌ಗಡ್ ಮುಖ್ಯಮಂತ್ರಿ ರಮನ್ ಸಿಂಗ್ ಸಹ ಒಪ್ಪಿಗೆ ಸೂಚಿಸಿದ್ದಾರೆ.

ಛತ್ತೀಸ್‌ಗಡದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನ ರ್ಯಾಲಿ ಸಂದರ್ಭದಲ್ಲಿ ದಾಳಿ ನಡೆಸಿದ್ದ ನಕ್ಸಲರು ಛತ್ತೀಸ್‌ಗಡ್‌ದ ಕಾಂಗ್ರೆಸ್ ಹಿರಿಯ ನಾಯಕ ನಂದ ಕುಮಾರ್ ಪಟೇಲ್ ಸೇರಿದಂತೆ 27 ಮಂದಿಯನ್ನು ಹತ್ಯೆಗೈದಿದ್ದರು. ಈ ದಾಳಿಯಲ್ಲಿ ಮಾಜಿ ಗೃಹ ಸಚಿವ ವಿ.ಸಿ. ಶುಕ್ಲ ಅವರ ದೇಹದೊಳಗೆ 3 ಗುಂಡುಗಳು ಹೊಕ್ಕಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement