ನನಗೆ ಮೀನುಗಾರಿಕೆ ಖಾತೆ ಬೇಡ: ಅಭಯ್ಚಂದ್ರ ಜೈನ್
ತಮಗೆ ಮೀನುಗಾರಿಕೆ ಖಾತೆ ಬೇಡ ಎಂದಿರುವ ಮೀನುಗಾರಿಕೆ ಖಾತೆ ಸಚಿವ ಅಭಯ್ ಚಂದ್ರ ಜೈನ್ ಅವರು, ..
ಬೆಂಗಳೂರು: ತಮಗೆ ಮೀನುಗಾರಿಕೆ ಖಾತೆ ಬೇಡ ಎಂದಿರುವ ಮೀನುಗಾರಿಕೆ ಖಾತೆ ಸಚಿವ ಅಭಯ್ ಚಂದ್ರ ಜೈನ್ ಅವರು, ಸದ್ಯದಲ್ಲೇ ಖಾತೆ ಹಿಂದಿರುಗಿಸುವೆ ಎಂದು ಸೋಮವಾರ ಹೇಳಿದ್ದಾರೆ.
ನಾನು ಅಹಿಂಸೆ ಪ್ರತಿಪಾದನೆ ಮಾಡುವ ಜೈನ ಧರ್ಮಕ್ಕೆ ಸೇರಿದ್ದು, ಮೀನುಗಾರಿಕೆ ಇಲಾಖೆಯೊಂದಿಗಿನ ಕೆಲಸ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅಭಯ್ ಚಂದ್ರ ಜೈನ್ ಅವರು ತಿಳಿಸಿದ್ದಾರೆ.
ಮೀನುಗಾರಿಕೆ ಖಾತೆ ಬೇಡ ಎಂದು ನನ್ನ ಕುಟುಂಬ ಹಾಗೂ ಸಮುದಾಯದವರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಸದ್ಯದಲ್ಲೇ ತಾವು ತಮ್ಮ ಖಾತೆಯನ್ನು ಮುಖ್ಯಮಂತ್ರಿಗಳಿಗೆ ಹಿಂದಿರುಗಿಸುವುದಾಗಿ ಅಭಯ್ ಚಂದ್ರ ಜೈನ್ ಅವರು ಹೇಳಿದ್ದಾರೆ.