ಮಾಧ್ಯಮಗಳಿಂದ ರಾಜಿನಾಮೆಗೆ ಒತ್ತಡ: ಬಿಸಿಸಿಐ ಅಧ್ಯಕ್ಷ
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ರಾಜಿನಾಮೆ ನೀಡುವಂತೆ ಮಾಧ್ಯಮಗಳು ಪರೋಕ್ಷವಾಗಿ ಒತ್ತಾಯಿಸುತ್ತಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಎನ್. ಶ್ರೀನಿವಾಸನ್ ಸೋಮವಾರ ಹೇಳಿದ್ದಾರೆ.
ಬೆನ್ನು ಬಿಡದಂತೆ ನನ್ನನ್ನು ಹಿಂಬಾಲಿಸುವ ಮಾಧ್ಯಮಗಳು, ರಾಜಿನಾಮೆ ಹೊರತು ಪಡೆಸಿ ಬೇರೆ ಯಾವುದೇ ಪ್ರಶ್ನೆಯನ್ನು ಕೇಳುತ್ತಿಲ್ಲ. ನಿನ್ನೆಯಷ್ಟೆ ಪ್ರತಿಕಾಗೋಷ್ಟಿಯಲ್ಲಿ ರಾಜಿನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಆದರೆ ಮಾಧ್ಯಮಗಳು ಮಾತ್ರ ಬೆನ್ನು ಬಿಡದಂತೆ ಹಿಂಬಾಲಿಸಿ ರಾಜಿನಾಮೆ ಬಗ್ಗೆ ಪ್ರಸ್ತಾಪಿಸುತ್ತಿವೆ ಎಂದು ಶ್ರೀನಿವಾಸನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸ್ಪಾಟ್ ಹಗರಣ ಸಂಬಂಧ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಗೆ ಬಿಸಿಸಿಐ ಅಧ್ಯಕ್ಷನಾಗಿರುವ ನಾನು ಪೂರ್ಣವಾಗಿ ಸಹಕರಿಸಲಿದ್ದೇನೆ ಎಂದು ಹೇಳಿದ್ದಾರೆ.
ಈವರೆಗೆ ಬಿಸಿಸಿಐನ ಒಬ್ಬ ಸದಸ್ಯರು ನನ್ನ ರಾಜಿನಾಮೆ ಕೇಳಲಿಲ್ಲ. ನಾನು ನನ್ನ ಕರ್ತವ್ಯ ನಿರ್ವಹಿಸುವುದರಿಂದ ಹಿಂದೆ ಸರಿಯುವುದಿಲ್ಲ. ತಪ್ಪಿತಸ್ಥರ ವಿರುದ್ಧ ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.