ಮರಾಠಿಯಲ್ಲೇ ಪ್ರಮಾಣ ಸ್ವೀಕರಿಸಿದ ಎಂಇಎಸ್ ಶಾಸಕ
ವಿಧಾನಸಭೆಯಲ್ಲಿ ಆಡಳಿತ ಭಾಷೆ ಕನ್ನಡಕ್ಕೆ ಗೌರವ ನೀಡದ ಎಂಇಎಸ್ ಶಾಸಕರು ಮರಾಠಿಯಲ್ಲೇ..
ಬೆಂಗಳೂರು: ವಿಧಾನಸಭೆಯಲ್ಲಿ ಆಡಳಿತ ಭಾಷೆ ಕನ್ನಡಕ್ಕೆ ಗೌರವ ನೀಡದ ಎಂಇಎಸ್ ಶಾಸಕರು ಮರಾಠಿಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಪ್ರಮಾಣವಚನ ನಿಯಮ ಉಲ್ಲಂಘಿಸಿದ್ದಾರೆ. ಖಾನಾಪುರ ಎಂಇಎಸ್ ಶಾಸಕ ಅರವಿಂದ್ ಪಾಟೀಲ್ ಬುಧವಾರ ಮರಾಠಿಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಇಂದಿನಿಂದ ಆರಂಭವಾಗಿರುವ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನದಲ್ಲಿ ಶಾಸಕರಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಪ್ರತ್ಯೇಕವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಂಗಾಮಿ ಸ್ಪೀಕರ್ ಮಾಲಿಕಯ್ಯ ಗುತ್ತೇದಾರ್ ಎಲ್ಲ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂತರ ಸಚಿವರು ಹಾಗೂ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ಈ ವೇಳೆ ಎಂಇಎಸ್ನ ಶಾಸಕ ಅರವಿಂದ್ ಪಾಟೀಲ್ ಮರಾಠಿಯಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೆ ಸಚಿವ ಟಿ.ಬಿ.ಜಯಚಂದ್ರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಮೌನಕ್ಕೆ ಶರಣಾದರು.
ಇನ್ನು ಸಚಿವ ಖಮರುಲ್ ಇಸ್ಲಾಂ ಅವರು ಸಹ ಕನ್ನಡದ ಬದಲು ಇಂಗ್ಲೀಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.