ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿರ್ದೇಶಕ ರಿತುಪರ್ಣೊ ಘೋಷ್ ನಿಧನ

ರಾಷ್ಟ್ರ ಪ್ರಶಸ್ತಿ ವಿಜೇತ, ಖ್ಯಾತ ಚಲನಚಿತ್ರ ನಿರ್ದೇಶಕ ರಿತುಪರ್ಣೊ ಘೋಷ್ ಅವರು..

Lingaraj Badiger
Updated On : 30 May 2013, 5:07 am

ಕೋಲ್ಕತಾ: ಹಲವು ರಾಷ್ಟ್ರ ಪ್ರಶಸ್ತಿ ವಿಜೇತ, ಖ್ಯಾತ ಚಲನಚಿತ್ರ ನಿರ್ದೇಶಕ ರಿತುಪರ್ಣೊ ಘೋಷ್ ಅವರು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

49 ವರ್ಷದ ಘೋಷ್ ಅವರು ಇಂದು ಬೆಳಗ್ಗೆ 7.30ರ ಸುಮಾರಿಗೆ ದಕ್ಷಿಣ ಕೋಲ್ಕತಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

1994ರಲ್ಲಿ 'ಹಿರೆರ್ ಅಂಗ್ತಿ' (ಡೈಮಂಡ್ ರಿಂಗ್) ಎಂಬ ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನ ಆರಂಭಿಸಿದ ಘೋಷ್, ಒಟ್ಟು 19 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆ ಪೈಕಿ 12 ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಕೆಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

1995ರಲ್ಲಿ ಘೋಷ್ ಅವರ 'ಯುನಿಶ್ ಏಪ್ರಿಲ್‌' ಎಂಬ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. 'ದಹನ್‌', 'ಅಸುಖ್‌' ಸೇರಿದಂತೆ ಹಲವು ಚಿತ್ರಗಳನ್ನು ಘೋಷ್ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement