ಇನ್‌ಫೋಸಿಸ್‌ಗೆ ಮರಳಿದ ನಾರಾಯಣಮೂರ್ತಿ
ಮಾಹಿತಿ ತಂತ್ರಜ್ಞಾನ ದಿಗ್ಗಜ, ಇನ್‌ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿಯವರು ಮತ್ತೆ ಇನ್ಫಿಗೆ ಮರಳಿದ್ದು, ಕಂಪನಿಯ...
ಮುಂಬೈ: ಮಾಹಿತಿ ತಂತ್ರಜ್ಞಾನ ದಿಗ್ಗಜ, ಇನ್‌ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿಯವರು ಮತ್ತೆ ಇನ್ಫಿಗೆ ಮರಳಿದ್ದು, ಕಂಪನಿಯ ಕಾರ್ಯಾಕಾರಿ ಅಧ್ಯಕ್ಷರಾಗಿ ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ಶನಿವಾರ ನೇಮಕಗೊಂಡಿದ್ದಾರೆ.
ಇಂದಿನಿಂದ ಜಾರಿಗೆ ಬರುವಂತೆ ಕಾರ್ಯಕಾರಿ ಅಧ್ಯಕ್ಷರಾಗಿ ಮತ್ತು ಹೆಚ್ಚುವರಿ ನಿರ್ದೇಶಕರ ಹುದ್ದೆಗೆ ನಾರಾಯಣ ಮೂರ್ತಿ ಅವರನ್ನು ಮರು ನೇಮಕ ಮಾಡಲಾಗಿದೆ ಎಂದು ಇನ್‌ಫೋಸಿಸ್ ಆಡಳಿತ ಮಂಡಳಿ ತಿಳಿಸಿದೆ.
ನಿನ್ನೆ ನಡೆದ ಇನ್‌ಫೋಸಿಸ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಿವೃತ್ತಿ ಜೀವನ ನಡೆಸುತ್ತಿದ್ದ ನಾರಾಯಣ ಮೂರ್ತಿ ಅವರಿಗೆ ಮತ್ತೆ ಸವಾಲಿನ ಜವಾಬ್ದಾರಿ ನೀಡಲಾಗಿದೆ.
ಪ್ರಸ್ತುತ ಇನ್‌ಫೋಸಿಸ್ ಅಧ್ಯಕ್ಷ ಕೆ.ವಿ. ಕಾಮತ್ ಅವರು ತಮ್ಮ ಸ್ಥಾನವನ್ನು ಮೂರ್ತಿ ಅವರಿಗೆ ಬಿಟ್ಟುಕೊಡಲಿದ್ದು, ಕಾಮತ್ ಅವರು ಸ್ವತಂತ್ರ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.