2050ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತ ನಂ. 1
ಪ್ಯಾರಿಸ್: 2050ರ ವೇಳೆಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೆ ಹೇರಲಿದೆ ಎಂಬ ಮಾಹಿತಿ ಫ್ರೆಂಚ್ ಜನಸಂಖ್ಯೆ ಅಧ್ಯಾಯನ ವರದಿ ಬಹಿರಂಗಪಡಿಸಿದೆ. ವರದಿಯ ಪ್ರಕಾರ ಆ ವೇಳೆಗೆ ಪ್ರಪಂಚದ ಜನಸಂಖ್ಯೆ 9.7 ಬಿಲಿಯನ್ಗೆ ತಲುಪಲಿದೆ ಎಂದು ಭವಿಷ್ಯ ನುಡಿದಿದೆ.
2050ರ ವೇಳೆಗೆ ಪ್ರಪಂಚದ ಜನಸಂಖ್ಯೆ ಪ್ರಮಾಣ ಕುರಿತಂತೆ ಫ್ರೆಂಚ್ ಜನಸಂಖ್ಯೆ ಅಧ್ಯಾಯನ ಸಂಸ್ಥೆ(ಐಎನ್ಇಡಿ)ಯು ಜನಸಂಖ್ಯೆ ವರದಿ ಸಿದ್ದಪಡಿಸಿದ್ದು, ಅದರಂತೆ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ನಂ. 1 ಸ್ಥಾನ ಪಡೆಯಲಿದೆ ಎಂದು ತಿಳಿಸಿದೆ. ಆ ವೇಳೆಗೆ ಭಾರತದ ಜನಸಂಖ್ಯೆ 1.6 ಬಿಲಿಯನ್ಗೆ ದಾಟಲಿದ್ದು, ಚೀನಾ ಜನಸಂಖ್ಯೆ 1.3 ಬಿಲಿಯನ್ಗೆ ತಲುಪಲಿದೆ. ಹೀಗಾಗಿ ಚೀನಾ ಎರಡನೇ ಸ್ಥಾನಕ್ಕೆ ಇಳಿಯಲಿದೆ ಎಂದು ವರದಿ ತಿಳಿಸಿದೆ.
ವರದಿ ಪ್ರಕಾರ, ಪ್ರಸ್ತುತ ಪ್ರಪಂಚದ ಜನಸಂಖ್ಯೆ 7.1 ಬಿಲಿಯನ್ ಇದ್ದು, ಮುಂದಿನ ಮೂವತೈದು ವರ್ಷಗಳಲ್ಲಿ 1.6 ಬಿಲಿಯನಷ್ಟು ಜನಸಂಖ್ಯೆ ಹೆಚ್ಚಾಗಲಿದೆ. ಇದರೊಂದಿಗೆ 2050ರ ವೇಳೆಗೆ ಪ್ರಪಂಚದ ಜನಸಂಖ್ಯೆ 9.7 ಬಿಲಿಯನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.
ಪ್ರಸ್ತುತ 1.3 ಬಿಲಿಯನ್ ಜನಸಂಖ್ಯೆ ಹೊಂದಿರುವ ಚೀನಾ ಪ್ರಥಮ ಸ್ಥಾನದಲ್ಲಿದ್ದು, 1.2 ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಯುಎಸ್ 316.2 ಮಿಲಿಯನ್ ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ನಂತರ 248.5 ಮಿಲಿಯನ್ ಹೊಂದಿರುವ ಇಂಡೋನೇಷಿಯ ನಾಲ್ಕನೇ ಸ್ಥಾನದಲ್ಲಿದೆ. 195.5 ಮಿಲಿಯನ್ ಜನಸಂಖ್ಯೆ ಹೊಂದಿರುವ ಬ್ರೆಸಿಲ್ ಐದನೇ ಸ್ಥಾನದಲ್ಲಿದೆ.
ಕಳೆದ ಜೂನ್ನಲ್ಲಿ ಯುಎಸ್ ಅಧ್ಯಾಯನ ಸಂಸ್ಥೆ ನೀಡಿದ ವರದಿ ಪ್ರಕಾರ ಪ್ರಪಂಚದ ಜನಸಂಖ್ಯೆ 9.6 ಬಿಲಿಯನ್ಗೆ ತಲುಪುವ ಸಾಧ್ಯತೆಗಳಿವೆ ಎಂದು ತಿಳಿಸಿತ್ತು.