ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇನ್ಮುಂದೆ ಪೆಟ್ರೋಲ್ ಪಂಪ್‌ಗಳಲ್ಲೂ ಸಿಗುತ್ತೆ ಎಲ್‌ಪಿಜಿ ಸಿಲಿಂಡರ್

ಮಹಾನಗರಗಳಲ್ಲಿನ ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ 5 ಕೆ.ಜಿಯ ಸಣ್ಣ ಸಿಲಿಂಡರ್‌ಗಳನ್ನು ಸೇಲ್ ಮಾಡಲು..

Lingaraj Badiger
Updated On : 2 Oct 2013, 5:00 am

ನವದೆಹಲಿ: ಮಹಾನಗರಗಳಲ್ಲಿನ ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ 5 ಕೆ.ಜಿಯ ಸಣ್ಣ ಸಿಲಿಂಡರ್‌ಗಳನ್ನು ಸೇಲ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇನ್ನುಮುಂದೆ ಪೆಟ್ರೋಲ್ ಪಂಪ್‌ಗಳಲ್ಲೂ ಅಡಿಗೆ ಅನಿಲದ ಸಿಲಿಂಡರ್‌ಗಳು ದೊರೆಯಲಿವೆ.

ಕೇಂದ್ರ ಸರ್ಕಾರ ಎಲ್‌ಪಿಜೆ ಸಂಪರ್ಕ ಬದಲಾವಣೆ ಕಾರ್ಯವನ್ನು ಸಹ ಸರಳಗೊಳಿಸಿದ್ದು, ಪೊರ್ಟಬಿಲಿಟಿ ಮೂಲಕ ಒಂದು ಬಟನ್(ಗುಂಡಿ) ಒತ್ತುವ ಮೂಲಕ ಗ್ರಾಹಕರು ತಮ್ಮ ಗ್ಯಾಸ್ ಡೀಲರ್‌ನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಬದಲಾಯಿಸಿಕೊಳ್ಳಬಹುದು ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದು, ಗ್ಯಾಸ್ ಕಂಪನಿ ಹೊಂದಿರುವ ಪೆಟ್ರೋಲ್ ಪಂಪ್‌ಗಳಲ್ಲಿ ಮಾತ್ರ 5ಕೆಜಿ ಎಲ್‌ಪಿಜೆ ಸಿಲಿಂಡರ್‌ಗಳು ಲಭ್ಯವಾಗಲಿವೆ. ದೇಶಾದ್ಯಂತ ಒಟ್ಟು 47,000 ಪೆಟ್ರೋಲ್ ಪಂಪ್‌ಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಆದರೆ ಸದ್ಯ ಈ ಸೌಲಭ್ಯವನ್ನು ದೆಹಲಿ, ಮುಂಬೈ ಕೋಲ್ಕತಾ, ಚೆನ್ನೈ ಹಾಗೂ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement