ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಾ.ನಗರಕ್ಕೆ ಸಾವಿರ ಕೋಟಿ ರು.ಯೋಜನೆ ಘೋಷಿಸಿದ ಸಿಎಂ

ರಾಜ್ಯದ ಮುಖ್ಯಮಂತ್ರಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಪದವಿ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯ ನಡುವೆಯೂ ಮೂಢನಂಬಿಕೆಗೆ ಸೆಡ್ಡು ಹೊಡೆದಿರುವ..

Lingaraj Badiger
Updated On : 7 Oct 2013, 1:49 am

ಚಾಮರಾಜನಗರ: ರಾಜ್ಯದ ಮುಖ್ಯಮಂತ್ರಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಪದವಿ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯ ನಡುವೆಯೂ ಮೂಢನಂಬಿಕೆಗೆ ಸೆಡ್ಡು ಹೊಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಶಾಪಗ್ರಸ್ಥ ಜಿಲ್ಲೆಗೆ ಸಾವಿರ ಕೋಟಿ ರುಪಾಯಿ ಯೋಜನೆಗಳನ್ನು ಘೋಷಿಸಿದ್ದಾರೆ.

ಇಲ್ಲಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಈ ಮೌಢ್ಯಗಳಿಗೆಲ್ಲಾ ನಾನು ಬೆಲೆ ಕೊಡುವುದಿಲ್ಲ. ಇದು ಜನರೇ ಸೃಷ್ಟಿಸಿದ ಮೌಢ್ಯತೆ, ಇದಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿದರು. ಆದರೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಚಾಮರಾಜೇಶ್ವರ ದೇವಾಲದಯಲ್ಲಿ ಸಿಎಂ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವರಾದ ಮಹದೇವ್ ಪ್ರಸಾದ್, ಶ್ರೀನಿವಾಸ್ ಪ್ರಸಾದ್, ಎಚ್.ಸಿ.ಮಹದೇವಪ್ಪ ಹಾಗೂ ಕಿಮ್ಮನೆ ರತ್ನಾಕರ ಸಿದ್ದುಗೆ ಸಾಥ್ ನೀಡಿದರು.

ಹಿಂದೆ ಸಾಕಷ್ಟು ಬಾರಿ ನಾನು ಚಾಮರಾಜನಗರಕ್ಕೆ ಬಂದಿದ್ದೇನೆ. ಚಾಮರಾಜನಗರ ಜಿಲ್ಲೆಯಾಗಿ ಬದಲಾದಾಗಲೂ ಬಂದಿದ್ದೇನೆ ಮತ್ತು ಮುಂದೆಯೂ ಬರುತ್ತೇನೆ ಎಂದು ಸಿಎಂ ಹೇಳಿದರು. ಅಲ್ಲದೆ ಜಿಲ್ಲೆಗೆ 1 ಸಾವಿರ ಕೋಟಿ ರುಪಾಯಿ ಯೋಜನೆಗಳನ್ನು ಘೋಷಿಸಿಸಿ, ಚಾಮರಾಜನಗರಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ್ ಪ್ರಸಾದ್ ಅವರು, ಕೊಟ್ಟ ಮಾತಿನಂತೆ ಸಿಎಂ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಆಗಮನದಿಂದ ಸಿಎಂ ಶಾಪ ವಿಮೋಚನೆಯಾಗಿದೆ. ಮುಂದೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿರೀಕ್ಷಿಸಿದ್ದೇವೆ ಎಂದು ಹೇಳಿದರು.

ಆದರೆ ಈ ಭೇಟಿಯಿಂದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳದೇ ಇರಲಿ ಎಂದು ಹರಕೆ ಹೊತ್ತು, ಅವರ ಬೆಂಬಲಿಗರು ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಶಾಂತಿ ಹೋಮ ನಡೆಸಿದ್ದಾರೆ. ನಾಸ್ತಿಕರಲ್ಲದೇ ಇದ್ದರೂ ಡಂಭಾಚಾರ ಮೆಚ್ಚದ ಸಿದ್ದರಾಮಯ್ಯನವರನ್ನು ಮೆಚ್ಚಿಸಲು ಅವರ ಕೆಲ ಬೆಂಬಲಿಗರು ಈಗ ದೇವತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಆರ್.ಟಿ.ನಗರ ಸಮೀಪದ ದಿನ್ನೂರು ಕೋದಂಡರಾಮ ಮಂದಿರದಲ್ಲಿ ಸಿದ್ದರಾಮಯ್ಯನವರ ಸಲುವಾಗಿ ಶಾಂತಿ ಹೋಮವೊಂದು ಸದ್ದಿಲ್ಲದೇ ನಡೆದು ಹೋಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement