ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಸ್‌ಬಿಐನಿಂದ ಕಾರು, ಗೃಹಬಳಕೆ ವಸ್ತುಗಳ ಸಾಲದ ಬಡ್ಡಿದರ ಇಳಿಕೆ

ದಸರಾ ಹಬ್ಬದ ಪ್ರಯುಕ್ತ ದೇಶದ ಜನರಿಗೆ ಇದೊಂದು ಸಿಹಿ ಸುದ್ದಿ. ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಕಾರು ಮತ್ತು ಗೃಹ ಬಳಕೆ ವಸ್ತು...

Vishwanath S
Updated On : 9 Oct 2013, 7:24 am

ನವದೆಹಲಿ: ದಸರಾ ಹಬ್ಬದ ಪ್ರಯುಕ್ತ ದೇಶದ ಜನರಿಗೆ ಇದೊಂದು ಸಿಹಿ ಸುದ್ದಿ. ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಕಾರು ಮತ್ತು ಗೃಹ ಬಳಕೆ ವಸ್ತುಗಳ ಸಾಲದ ಮೇಲಿನ ಬಡ್ಡಿದರವನ್ನು ಬುಧವಾರ ಇಳಿಸಿದೆ.

ಕಾರು ಹಾಗೂ ಗೃಹಬಳಕೆ ವಸ್ತುಗಳ ಸಾಲದ ಮೇಲಿನ ಬಡ್ಡಿದರವನ್ನು ಇಳಿಸಿದೆಯಲ್ಲದೆ, ಕಡಿಮೆ ಪರಿಷ್ಕರಣಾ ಶುಲ್ಕವನ್ನು ವಿಧಿಸಲು ನಿರ್ಧರಿಸಿದೆ. ಆಟೋಮೊಬೈಲ್ ಹಾಗೂ ಏರ್ ಕಂಡೀಷನರ್, ರೆಫ್ರಿಜರೇಟರ್ ಮತ್ತು ಟೆಲಿವಿಷನ್ ವಸ್ತುಗಳನ್ನು ಖರೀದಿಸಲು ಸಾಲದ ಮೇಲೆ ವಿಶೇಷ ಬಡ್ಡಿದರಗಳನ್ನು ನೀಡಲು ಬ್ಯಾಂಕ್ ತೀರ್ಮಾನಿಸಿದೆ.

ಕಾರು ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.20 ರಷ್ಟು ಇಳಿಸಲಾಗಿದ್ದು, ಈ ಮುಂಚೆ ಇದ್ದ ಶೇ. 10.75 ಬಡ್ಡಿ ದರದ ಬದಲಿಗೆ ಶೇ.10.55ಕ್ಕೆ ಇಳಿಸಿದೆ. ಇದೇ ವೇಳೆ ಗೃಹ ಬಳಕೆ ವಸ್ತುಗಳ ಮೇಲಿನ ಕಡಿಮೆ ಪರಿಷ್ಕರಣಾ ಶುಲ್ಕವನ್ನು ಶೇ.0.51 ಇಳಿಸಲು ನಿರ್ಧಸಿದ್ದು, ಕನಿಷ್ಠ 1020 ರುಪಾಯಿಗೆ ಬದಲಾಗಿ 500 ರುಪಾಯಿಗೆ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಈ ಮೊದಲು ಗೃಹಬಳಕೆ ವಸ್ತುಗಳನ್ನು ಖರೀದಿಸಲು ಸಾಲದ ಮೇಲೆ ವಿಶೇಷ ಬಡ್ಡಿದರಗಳನ್ನು ನೀಡಲು ಪಂಜಾಬ್ ನ್ಯಾಷನಲ್ ಬ್ಯಾಂಕ್, ಒಬಿಸಿ ಮತ್ತು ಐಡಿಬಿಐ ಬ್ಯಾಂಕ್‌ಗಳು ಮುಂದಾಗಿದ್ದವು. ಇದೀಗ ಆ ಸಾಲಿಗೆ ಎಸ್‌ಬಿಐ ಸಹ ಸೇರ್ಪಡೆಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement