ರಾಸಾಯನಶಾಸ್ತ್ರ ನೊಬಲ್ ಮೂವರಿಗೆ ಹಂಚಿಕೆ
ಸ್ಟಾಕ್ಹೋಂ: ಪ್ರಸಕ್ತ ವರ್ಷದ ರಾಸಾಯನಶಾಸ್ತ್ರದ ನೊಬಲ್ ಪ್ರಶಸ್ತಿಯನ್ನು ಮೂವರು ಹಂಚಿಕೊಂಡಿದ್ದಾರೆ. ವಿಜ್ಞಾನಿಗಳಾದ ಮಾರ್ಟಿನ್ ಕರ್ಪಲ್ಸ್, ಮೈಕಲ್ ಲೇವಿಟ್ಟ್, ವಾರ್ಶಿಲ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯ ಗೌರವ ಸಂದಿದೆ.
ರಾಸಾಯನಿಕ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಊಹಿಸಲು ಬಳಸಲಾಗುವ ಕಾರ್ಯಸೂಚಿಗಳು ಎಂಬ ವಿಷಯದ ಮೇಲೆ ಅಧ್ಯಾಯನ ನಡೆಸಿದ್ದರು. ಸಂಕೀರ್ಣ ರಾಸಾಯನಿಕ ವ್ಯವಸ್ಥೆಗಳಿಗೆ ಮಲ್ಟಿಸ್ಕೇಲ್ ಮಾದರಿಗಳ ಅಭಿವೃದ್ಧಿ ಕುರಿತ ಸಂಶೋಧನೆಗಾಗಿ ಇವರಿಗೆ ರಾಯಲ್ ಸ್ವೀಡಿಷ್ ಅಕಾಡಮಿ ಸಂಸ್ಥೆಯು ಪ್ರಶಸ್ತಿ ನೀಡಿದೆ.
ಪ್ರಶಸ್ತಿ ಪ್ರಕಟವಾಗುತ್ತಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ಶಿಲ್ ಅವರು, ಪ್ರತಿಷ್ಠಿತ ನೊಬಲ್ ಪ್ರಶಸ್ತಿ ಲಭಿಸಿರುವುದು ತಮ್ಮಗೆ ಖುಷಿ ತಂದಿದೆ ಎಂದರು.
ಈ ಮುನ್ನ ವೈದ್ಯಕೀಯ ನೊಬಲ್ ಪ್ರಶಸ್ತಿಯನ್ನು ಅಮೆರಿಕದ ಜೇಮ್ಸ್ ರೋಥ್ಮನ್, ಯಾಂರ್ಡಿ ಶೆಕ್ಮನ್ ಹಾಗೂ ಜರ್ಮನ್ನ ಥಾಮಸ್ ಸ್ಯುಡಾಫ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.