ಲಿಬಿಯಾ ಪ್ರಧಾನಿ ಅಲಿ ಜೈದಾನ್ ಅಪಹರಣ
ಕೊರಿಂಥಿಯನ್ ಹೋಟೆಲ್ನಿಂದ ಸಿನಿಮಿಯ ರೀತಿಯಲ್ಲಿ ಲಿಬಿಯಾ ಪ್ರಧಾನಿ ಅಲಿ ಜೈದಾನ್ ಅವರನ್ನು ಗುರುವಾರ...
ಟ್ರಿಪೋಲಿ: ಕೊರಿಂಥಿಯನ್ ಹೋಟೆಲ್ನಿಂದ ಸಿನಿಮಿಯ ರೀತಿಯಲ್ಲಿ ಲಿಬಿಯಾ ಪ್ರಧಾನಿ ಅಲಿ ಜೈದಾನ್ ಅವರನ್ನು ಗುರುವಾರ ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಟ್ರಿಪೋಲಿಯಲ್ಲಿರುವ ಹೋಟೆಲ್ನಿಂದ ಶಸ್ತ್ರಸಜ್ಜಿತ ವ್ಯಕ್ತಿಯೊರ್ವ ಅಲಿ ಜೈದಾನ್ ಅವರನ್ನು ಅಪಹರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಸಚಿವಾಲಯ ಇಂದೊಂದು ಗಾಳಿ ಸುದ್ದಿ ಎಂದಿತ್ತು. ನಂತರ ಅಪರಹಣ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ತಮ್ಮ ಹೇಳಿಕೆಯನ್ನು ಹಿಂಪಡೆದ ಡೆನಿಯಲ್ ಎಂಬುವರು ಅಪಹರಣವಾಗಿರುವುದನ್ನು ಧೃಡಪಡಿಸಿದ್ದಾರೆ.
ಪ್ರಧಾನಿ ಅಪಹರಣದ ಪ್ರತ್ಯಕ್ಷದರ್ಶಿ, ಹೋಟೆಲ್ ಕ್ಲರ್ಕ್ನ ಹೇಳಿಕೆ ಪ್ರಕಾರ, ಪ್ರಧಾನಿ ಅಲಿ ಜೈದಾನ್ ಅವರು ಹೋಟೆಲ್ನ ಹೊರಗೆ ತಮ್ಮ ಕಾರಿಗಾಗಿ ಕಾಯುತ್ತಿದ್ದ ವೇಳೆ ದೀಢಿರನೆ ದಾಳಿ ಮಾಡಿದ ಬಂದೂಕುಧಾರಿ ಬಂಡುಕೋರರು ಪ್ರಧಾನಿಯನ್ನು ಅಪಹರಿಸಿಕೊಂಡು ಹೋದರು ಎಂದು ತಿಳಿಸಿದ್ದಾನೆ. ಈ ವೇಳೆ ಯಾವುದೇ ಗುಂಡಿನ ಚಕಮಿಕಿ ನಡೆದ ವರದಿಯಾಗಿಲ್ಲ.
ಲಿಬಿಯಾ ಸರ್ವಾಧಿಕಾರಿ ಅಮ್ಮರ್ ಗಡಾಫಿ ಅಂತ್ಯದ ಬಳಿಕವೂ ಲಿಬಿಯಾ ದೇಶದಲ್ಲಿ ಶಾಂತಿ ನೆಲೆಸುವ ಸೂಚನೆಗಳು ಕಾಣುತ್ತಿಲ್ಲ. ಹೊಸ ಸರ್ಕಾರವನ್ನು ಬಂಡುಕೋರರು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಗಡಾಫಿಯನ್ನು ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಬಿಯಾ ಮಿಲಿಟರಿ ಪಡೆ ಅಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಹೆಚ್ಚು ಸ್ವಾಯತ್ತತೆ ನೀಡುವಂತೆ ಆಗ್ರಹಿಸಿದ್ದವು. ಸ್ವಾಯತ್ತತೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಈ ಅಪಹರಣ ನಡೆದಿದೆ ಎನ್ನಲಾಗುತ್ತಿದೆ.