ನಾನು ಪಾಕ್ ಪ್ರಧಾನಿಯಾಗಿ ರಾಷ್ಟ್ರ ಸೇವೆ ಮಾಡಬೇಕು: ಮಲಾಲ
ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಧ್ವನಿ ಎತ್ತಿದ ಮಾನವ ಹಕ್ಕುಗಳ ಹೋರಾಟಗಾರ್ತಿ ಹದಿ ಹರೆಯದ ಮಲಾಲ...
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಧ್ವನಿ ಎತ್ತಿದ ಮಾನವ ಹಕ್ಕುಗಳ ಹೋರಾಟಗಾರ್ತಿ ಹದಿ ಹರೆಯದ ಮಲಾಲ ಯುಸುಫ್ ಜಾಯ್, ತಾನು ಪಾಕಿಸ್ತಾನದ ಪ್ರಧಾನಿಯಾಗಿ ರಾಷ್ಟ್ರ ಸೇವೆ ಮಾಡಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದ್ದಾಳೆ.
ನ್ಯೂಯಾರ್ಕ್‌ನಲ್ಲಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಲಾಲ ತನ್ನ ಮನಸ್ಸಿನ ಹಂಬಲವನ್ನು ಹೊರಹಾಕಿದ್ದು, ಪಾಕಿಸ್ತಾನದ ಪ್ರಧಾನಿಯಾಗಿ ನಾನು ನನ್ನ ದೇಶದ ಸೇವೆ ಮಾಡಬೇಕು. ರಾಜಕಾರಣದಲ್ಲಿ ಇಳಿದಾಗ ಮಾತ್ರ ರಾಷ್ಟ್ರದ ಸೇವೆ ಮಾಡಲು ಸಾಧ್ಯ ಎಂದಿದ್ದಾಳೆ.
ಇದೇ ವೇಳೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಹೀಗಾಗಿ ನಾನು ಪಾಕಿಸ್ತಾನದ ಪ್ರಧಾನಿಯಾದರೆ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ಮೀಸಲಿಡುತ್ತೇನೆ. ಅಲ್ಲದೆ ವಿದೇಶಾಂಗ ವ್ಯವಹಾರಗಳು ಮೇಲು ಗಮನ ಹರಿಸುತ್ತೇನೆ. ಪಾಕಿಸ್ತಾನದಲ್ಲಿ ಯಾರು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನನ್ನ ಕನಸು ಎಂದಿದ್ದಾರೆ.
ಮಾನವ ಹಕ್ಕುಗಳು ಹೋರಾಟಕ್ಕೆ ಸಂಬಂಧಿಸಿದಂತೆ ಯೂರೋಪ್ ಸಂಸತ್ತು ನೀಡುವ ಪ್ರತಿಷ್ಠಿತ ಸಕರೋವ್ ಪ್ರಶಸ್ತಿಯನ್ನು ಮಲಾಲ ಪಡೆದಿದ್ದಾರೆ.
ಹೆಣ್ಣು ಮಕ್ಕಳ ಶಿಕ್ಷಣದ ಕುರಿತಾಗಿ ಮಾತನಾಡಿದ ಮಲಾಲ ಮೇಲೆ ತಾಲಿಬಾನ್ ಉಗ್ರರು, ಆಕೆ ಶಾಲೆಗೆ ಹೋಗುತ್ತಿದ್ದ ಬಸ್ ಮೇಲೆ ದಾಳಿ ಮಾಡಿ ಅತ್ಯಂತ ಸಮೀಪದಿಂದ ಮಾಲಾಲ ಮೇಲೆ ಗುಂಡು ಹಾರಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲಾಲಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್‌ನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಮಲಾಲ ಅಂದಿನಿಂದ ಬಹಿರಂಗವಾಗಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತಾಗಿ ಘಂಟಾ ಘೋಷವಾಗಿ ಮಾಡನಾಡಲು ಪ್ರಾರಂಭಿಸಿದ್ದಾರೆ.