ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಫೈಲಿನ್ ಎಫೆಕ್ಟ್: ಪ್ರಣಬ್ ಪ.ಬಂಗಾಳ ಭೇಟಿ ರದ್ದು

ಬಂಗಾಳ ಕೊಲ್ಲಿಯಿಂದ ಗಂಟೆಗೆ 22 ಕಿ.ಮೀ ವೇಗದಲ್ಲಿ ಪೂರ್ವ ಕರಾವಳಿಯತ್ತ ಮುನ್ನುಗ್ಗುತ್ತಿರುವ ಫೈಲಿನ್ ಪರಿಣಾಮದಿಂದಾಗಿ..

Lingaraj Badiger
Updated On : 12 Oct 2013, 3:53 am

ನವದೆಹಲಿ: ಬಂಗಾಳ ಕೊಲ್ಲಿಯಿಂದ ಗಂಟೆಗೆ 22 ಕಿ.ಮೀ ವೇಗದಲ್ಲಿ ಪೂರ್ವ ಕರಾವಳಿಯತ್ತ ಮುನ್ನುಗ್ಗುತ್ತಿರುವ ಫೈಲಿನ್ ಪರಿಣಾಮದಿಂದಾಗಿ ರಾಷ್ಟ್ರಪತಿಗಳ ಪಶ್ಚಿಮ ಬಂಗಾಳ ಭೇಟಿ ರದ್ದುಗೊಂಡಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪಶ್ಚಿಮ ಬಂಗಾಳದ ತಮ್ಮ ನಿವಾಸದಲ್ಲಿ ಪಾರಂಪರಿಕ ದುರ್ಗಾ ಪೂಜೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದರು. ಆದರೆ ಇಂದು ಸಂಜೆ ವೇಳೆಗೆ ಫೈಲಿನ್ ಒಡಿಶಾ ಕರಾವಳಿಗೆ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸವನ್ನು ಸದ್ಯಕ್ಕೆ ರದ್ದುಗೊಳಿಸಿದ್ದಾರೆ.

ಹವಾಮಾನ ವೈಪರಿತ್ಯದಿಂದಾಗಿ ರಾಷ್ಟ್ರಪತಿಗಳ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ವಕ್ತಾರ ವೇಣು ರಾಜಾಮೊನಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement