ರಾಹುಲ್ 'ಮುಗ್ಧ ಮಗು'; ಯಾರು ಏನೇ ಕೊಟ್ರು ಓದುತ್ತಾರೆ: ಅಜಂ ಖಾನ್
ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ..
ಬದುನ್(ಉತ್ತರಪ್ರದೇಶ): ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 'ಮುಗ್ಧ ಮಗು'ವಿದ್ದಂತೆ. ಯಾರೂ ಏನೇ ಬರೆದುಕೊಟ್ರು ಅವರು ಅದನ್ನು ಮೈಕಿನ ಮುಂದೆ ನಿಂತು ಓದುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
'ರಾಹುಲ್ ಓರ್ವ ಮುಗ್ಧ ಮಗುವಿದ್ದಂತೆ, ಬಾಬಾ ರಾಮ್ದೇವ್ ಸಹ ಹೀಗೆ ಕರೆದಿದ್ದಾರೆ. ಆದರೆ ಈ 'ಮುಗ್ಧ ಮಗು' ಯಾರು ಏನೇ ಬರೆದುಕೊಟ್ಟರೂ ಓದುತ್ತಾರೆ ಎಂದು ಉತ್ತರ ಪ್ರದೇಶ ಸಚಿವ ಅಜಂ ಖಾನ್ ವರದಿಗಾರರಿಗೆ ಹೇಳಿದ್ದಾರೆ.
ಮುಜಾಫರ್ನಗರ ಗಲಭೆಗೆ ಉತ್ತರ ಪ್ರದೇಶ ಸರ್ಕಾರವೇ ಕಾರಣ ಎಂಬ ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದ ಅಜಂ ಖಾನ್, ದೇಶದಲ್ಲಿ ಕೋಮುಗಲಭೆಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಎಂದು ದೂರಿದರು.
ಸ್ವಾತಂತ್ರ್ಯ ನಂತರ ಕಾಂಗ್ರೆಸ್ ದೇಶದಲ್ಲಿ ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದೆ ಮತ್ತು ಹಲವು ಗಲಭೆಗಳಿಗೆ ಕಾರಣವಾಗಿದೆ ಎಂದು ಖಾನ್ ಆರೋಪಿಸಿದರು.