ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉತ್ತಮ ಆಡಳಿತ ಕೊರತೆ ಮಧುಮೇಹ ಇದ್ದಂತೆ: ಮೋದಿ

ಉತ್ತಮ ಆಡಳಿತ ಕೊರತೆ ಮಧುಮೇಹ ಇದ್ದ ಹಾಗೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸೋಮವಾರ...

Vishwanath S
Updated On : 14 Oct 2013, 8:09 am

ಅಹಮದಾಬಾದ್: ಉತ್ತಮ ಆಡಳಿತ ಕೊರತೆ ಮಧುಮೇಹ ಇದ್ದ ಹಾಗೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಇಂದು ಅಹಮದಾಬಾದನಲ್ಲಿ ಮಾತನಾಡಿದ ನರೇಂದ್ರ ಮೋದಿ, ದೇಶದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾದರೆ ಅದು ದೇಶದ ಅಭಿವೃದ್ಧಿಗೆ ದಕ್ಕೆಯಾಗುತ್ತದೆ. ಉತ್ತಮ ಆಡಳಿತ ಕೊರತೆ ಮಧುಮೇಹ ಇದ್ದ ಹಾಗೆ, ಮಧುಮೇಹ ಹೇಗೆ ಒಬ್ಬ ವ್ಯಕ್ತಿಯ ಸಂಪೂರ್ಣ ದೇಹವನ್ನು ಆಕ್ರಮಿಸಿ ಆತನನ್ನು ನಿಶ್ಯಕ್ತಿಗೊಳಿಸುತ್ತದೆಯೊ ಹಾಗೆ ಉತ್ತಮ ಆಡಳಿತ ಕೊರತೆಯಿಂದ ಇಡೀ ದೇಶ ನಿಶ್ಯಕ್ತಿಗೊಳುತ್ತದೆ ಎಂದರು.

ಯಾವುದೇ ರಾಜ್ಯದ ಆಡಳಿತ ವ್ಯವಸ್ಥೆಯು ಪಾರದರ್ಶಕತೆಯಿಂದ ಕೂಡಿರಬೇಕು. ಜನತೆಯೊಂದಿಗೆ ನಿಕಟ ಸಂಪರ್ಕದಲ್ಲಿರುಬೇಕು ಆಗ ಮಾತ್ರ ಅಭಿವೃದ್ದಿ ಸಾಧ್ಯ ಎಂದರು. ಇದೇ ವೇಳೆ ಗುಜರಾತ್ ಒಂದು ಕಾಲಕ್ಕೆ ವ್ಯಾಪಾರಿ ಸಮಾಜವಾಗಿತ್ತು. ಇಂದು ಜ್ಞಾನಧಾರಿತ ಸಮಾಜವಾಗಿ ಪರಿವರ್ತನೆಗೊಂಡಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯುನ್ನತ ಆಡಳಿತ ವ್ಯವಸ್ಥೆಯಾಗಿದ್ದು, ಜನತೆಗೆ ಸರ್ಕಾರದ ಮೇಲೆ ವಿಶ್ವಾಸ ಇರಬೇಕು. ಅದೇ ರೀತಿ ಸರ್ಕಾರ ಸಹ ಜನತೆಯ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸಕ್ರಿಯವಾಗಿ ಪಾತ್ರವಹಿಸಬೇಕು. ಹೀಗೆ ಸರ್ಕಾರ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯಬೇಕು.

ಸರ್ಕಾರಗಳು ಜನರ ಹಿತಾಸಕ್ತಿಯ ರಕ್ಷಕರಿದಂತೆ. ಸರ್ಕಾರಗಳು ಜನರ ಸಾಮೂಹಿಕ ಬುದ್ಧಿವಂತಿಕೆಯನ್ನು ಒಪ್ಪಿಕೊಳ್ಳಬೇಕು. ಜನರು ಅಭಿವೃದ್ಧಿಯ ಕಡೆ ನಡೆಯಲು ಕಾತುರಾಗಿದ್ದಾರೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡಿರುವ ಬಿಜೆಪಿ ಅದೇ ಹಾದಿಯಲ್ಲಿ ನಡೆಯಲು ಶ್ರಮಿಸುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement