ಕಾಶ್ಮೀರದಲ್ಲಿ 'ಹಿಝ್ಬಲ್' ಕಮಾಂಡರ್ ಬಂಧನ
ಶ್ರೀನಗರ: ಕಾಶ್ಮೀರದ ಬಂಧಿಪುರ ಜಿಲ್ಲೆಯಲ್ಲಿ ಹಿಝ್ಬಲ್ ಮುಜಾಯಿದ್ದೀನ್ ಸಂಘಟನೆಯ ಕಮಾಂಡರ್‌ನನ್ನು ಭದ್ರತಾ ಪಡೆ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
ಕಳೆದ 14 ವರ್ಷಗಳಿಂದ ನಿರಂತರವಾಗಿ ಹಿಝ್ಬಲ್ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಜುನೈದ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಬುಧವಾರ ಇದೇ ಸಂಘಟನೆಗೆ ಸೇರಿದ ಮಂಜೂರ್ ಮತ್ತು ಅಶ್ರದ್ ಎಂಬುವರನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಕಾಶ್ಮೀರದ ಮನೆಯೊಂದರಲ್ಲಿ ಉಗ್ರರು ಅಡಗಿರುವುದಾಗಿ ಖಚಿತ ಮಾಹಿತಿ ಪಡೆದ ಪೊಲೀಸರು ಭದ್ರತಾ ಪಡೆ ಸಿಬ್ಬಂದಿಗಳೊಡನೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿಸುವಲ್ಲಿ ಯಾಶಸ್ವಿಯಾಗಿದ್ದಾರೆ. ತನ್ನ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ ಎಂದು ತಿಳಿದ ಕೂಡಲೆ ಜುನೈದ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಮನೆಯನ್ನು ಪೊಲೀಸರು ಸುತ್ತುವರೆದಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೇ ವೇಳೆ, ಜುನೈದ್‌ನಿಂದ ಒಂದು ಎಕೆ 47 ರೈಫಲ್ ಮತ್ತು ಎರಡು ನಿಯತಕಾಲಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಉಗ್ರ ಜುನೈದ್ ಭಾರತದ ಗಡಿ ರೇಖೆಯೊಳಗೆ ಅಕ್ರಮವಾಗಿ ನಸುಳಲು ಉಗ್ರರಿಗೆ ಮಾರ್ಗದರ್ಶನ ಮತ್ತು ಸಹಕರ ನೀಡುತ್ತಿದ್ದನು ಎಂದು ಪೊಲೀಸರು ದೂರಿದ್ದಾರೆ.