ಫೈಲಿನ್ ಚಂಡಮಾರುತ: ಸುಮಾರು 90 ಲಕ್ಷ ಜನರು ಬೀದಿ ಪಾಲು
ಫೈಲಿನ್ ಚಂಡಮಾರತ ಸುಮಾರು 90 ಲಕ್ಷದ ಜನರ ಮನೆಗಳನ್ನು ಧ್ವಂಸಗೊಳಿಸಿದ್ದು, ಲಕ್ಷಗಟ್ಟಲೇ ಜನರು ಬೀದಿಪಾಲಾಗಿದ್ದಾರೆ...
ಗೋಪಾಲ್ಪುರ್/ಶ್ರೀಕಾಕುಳಂ: ಫೈಲಿನ್ ಚಂಡಮಾರತ ಸುಮಾರು 90 ಲಕ್ಷದ ಜನರ ಮನೆಗಳನ್ನು ಧ್ವಂಸಗೊಳಿಸಿದ್ದು, ಲಕ್ಷಗಟ್ಟಲೇ ಜನರು ಬೀದಿಪಾಲಾಗಿದ್ದಾರೆ.
ಭಾನುವಾರ ಸಂಭವಿಸಿದ ಭೀಕರ ಫೈಲಿನ್ ಚಂಡಮಾರುತದಿಂದಾಗಿ 2,400ಕೋಟಿ ಬೆಲೆಬಾಳುವ ಭತ್ತದ ಬೆಳೆ ನಾಶವಾಗಿದೆ. ಚಂಡಮಾರುತ್ತಕ್ಕೆ 23 ಜನ ಬಲಿಯಾಗಿದ್ದಾರೆ. ಚಂಡಮಾರುತದಿಂದಾಗಿ ಒಡಿಶಾದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಹೆಚ್ಚಾಗಿದ್ದು, ಜನರನ್ನು ಸ್ಥಳಾಂತರಿಸಲಾಗಿದೆ.
ಒಡಿಶಾದ ಗೋಪಾಲಪುರದ ಸಮೀಪ ಅಪ್ಪಳಿಸಿದ ಫೈಲಿನ್ ಚಂಡಮಾರುತ, ಗಂಟೆಗೆ 200 ಕಿ.ಮೀ ವೇಗದಲ್ಲಿ ಮುನ್ನುಗ್ಗಿ ಹಾನಿ ಉಂಟುಮಾಡಿದೆ. ಘಟನೆಯಲ್ಲಿ ಇಬ್ಬರು ಒಡಿಶಾದವರು ಮೃತಪಟ್ಟಿದ್ದಾರೆ.
ಸಮುದ್ರದಲ್ಲಿ 3.5 ಮೀಟರ್ಗಿಂತಲೂ ಎತ್ತರದ ರಕ್ಷಸಗಾತ್ರದ ಅಲೆಗಳನ್ನು ಸೃಷ್ಟಿಸುತ್ತಲೇ ಭೂಪ್ರದೇಶದತ್ತ ಧಾವಿಸಿದ ಈ ಚಂಡಮಾರುತ ಒಡಿಶಾ, ಆಂಧ್ರ ಕರಾವಳಿಯಲ್ಲಿ ವಿರಾಟ ರೂಪ ಪ್ರದರ್ಶಿಸಿದೆ. ಎದುರಿಗೆ ಸಿಕ್ಕಿದ್ದನ್ನೆಲ್ಲ ಮುಕ್ಕುತ್ತಲೇ ಮುನ್ನುಗ್ಗಿದೆ.
ಫೈಲಿನ್ ಚಂಡಮಾರುತ ಅಪ್ಪಳಿಸಲಿಸಲಿದೇ ಎಂದು ತಿಳಿದ ಸರ್ಕಾರಗಳು ಮುಂಜಾಗ್ರತೆ ಕ್ರಮಕೈಂಡು, ಶೇ 95ರಷ್ಟು ಜನರನ್ನು ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.