ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಎಸ್‌ಪಿ ಶಾಸಕನ ಪತ್ನಿ ಹತ್ಯೆ: ಮಲತಾಯಿಯನ್ನೇ ಕೊಂದ ಮಕ್ಕಳು

Vishwanath S
Updated On : 14 Oct 2013, 6:55 am

ನವದೆಹಲಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಶಾಸಕ ಹಾಜಿ ಅಲೀಮ್‌ರ ಪತ್ನಿಯನ್ನು ಅವರ ಇಬ್ಬರು ಮಲಮಕ್ಕಳೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬುಲಂದ್ ಶಹರ್ ಶಾಸಕ ಅಲೀಮ್ ಅವರ ಪತ್ನಿ ರೆಹನಾ(40)ಅವರನ್ನು ಮೊದಲ ಪತ್ನಿಯ ಮಕ್ಕಳಾದ ದನಿಶ್ ಮತ್ತು ಅನಾಸ್ ಎಂಬುವರು ತಮ್ಮ ಚಾಲಕ ಮೊಹಮ್ಮದ್ ನದೀಮ್ ಜತೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಶಹೀದ್‌ನಗರದಲ್ಲಿ ಇಂದು ಬೆಳಿಗ್ಗೆ ಕಾರು ಚಾಲಕ ನದೀಮ್‌ನನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳಾದ ದನಿಶ್ ಮತ್ತು ಅನಾಸ್‌ನನ್ನು ಸೀಮಾಪುರಿಯ ಗಡಿ ಭಾಗದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.  

ಅಕ್ಟೋಬರ್ 9ರಂದು ದೆಹಲಿಯ ಜಫರಬಾದ್ ನಿವಾಸದಲ್ಲಿದ್ದ ರೆಹನಾ ಅವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ವೇಳೆ, ಶಾಸಕ ಖಾನ್ ಮಾತ್ರ ಹಜ್ ಯಾತ್ರೆಗೆ ತೆರಳಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಹಜ್‌ನಿಂದ ವಾಪಸಾದ ಖಾನ್ ರೆಹನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. 40 ವರ್ಷದ ರೆಹನಾ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಆದರೆ ಪೊಲೀಸರ ತನಿಖೆಯಿಂದ ರೆಹನಾ ಅವರ ಕೊಲೆ ಆಸ್ತಿ ವಿಚಾರಕ್ಕೆ ಆಗಿದೆ ಎಂಬುದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement