ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಧ್ಯಪ್ರದೇಶದ ರತನ್‌ಗಡ್‌ನಲ್ಲಿ ಕಾಲ್ತುಳಿತ್ತಕ್ಕೆ 112 ಸಾವು

ಮಧ್ಯಪ್ರದೇಶದ ರತನ್‌ಗಡ್‌ನ ದುರ್ಗಾ ದೇವಸ್ಥಾನದ ಬಳಿ ಉಂಟಾದ ಕಾಲ್ತುಳಿತಕ್ಕೆ 112 ಭಕ್ತಾದಿಗಳು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ...

Mainashree
Updated On : 14 Oct 2013, 11:53 am

ಭೋಪಾಲ್: ಮಧ್ಯಪ್ರದೇಶದ ರತನ್‌ಗಡ್‌ನ ದುರ್ಗಾ ದೇವಸ್ಥಾನದ ಬಳಿ ಉಂಟಾದ ಕಾಲ್ತುಳಿತಕ್ಕೆ 112 ಭಕ್ತಾದಿಗಳು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ನವರಾತ್ರಿ ಹಬ್ಬದ ಅಂಗವಾಗಿ ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯಲ್ಲಿರುವ ದುರ್ಗಾದೇವಿ ದೇವಸ್ಥಾನದ ಬಳಿ ಜನಸಾಗರ ನೆರೆದಿತ್ತು, ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ 112 ಜನರು ಬಲಿಯಾಗಿದ್ದಾರೆ. 100ಕ್ಕೂ ಹೆಚ್ಚು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ಘಟನೆಯಲ್ಲಿ ಮಹಿಳೆಯರು ಮತ್ತು 17 ಮಕ್ಕಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ದೇವಿ ದರ್ಶನಕ್ಕಾಗಿ ನೆರದಿದ್ದ ಜನಸ್ತೋಮದಿಂದಾಗಿ ಸೇತುವೆ ಕುಸಿಯುತ್ತಿದೆ ಎಂಬ ವದಂತಿ ಹರಡಿತ್ತು, ಈ ಹಿನ್ನಲೆಯಲ್ಲಿ ಜನರು ದಿಕ್ಕು ತೋಚದಂತೆ ಓಡತೊಡಗಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.

ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಘಟನೆ ಕುರಿತು ಪ್ರತ್ಯಾರೋಪಗಳನ್ನು ಮಾಡುತ್ತಿದ್ದು, ರಾಜಕೀಯ ಶುರು ಮಾಡಿದೆ. ನವರಾತ್ರಿ ಹಬ್ಬದ ಅಂಗವಾಗಿ ಸರಿಯಾದ ಮುಂಜಾಗ್ರತೆ ಕ್ರಮಕೈಗೊಳ್ಳದಿರುವುದೇ ಘಟನೆಗೆ ಕಾರಣವಾಗಿದೆ. ಘಟನೆ ಬಗ್ಗೆ ಸೂಕ್ತ ತನಿಖೆಗೆ ಆದೇಶ ಹೊರಡಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement