ಕಲ್ಲಿದ್ದಲು ಹಗರಣ: ಸಿಬಿಐಯಿಂದ ಹೊಸ ಎಫ್‌ಐಆರ್
ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಹೊಸ ಎಫ್ ಐಆರ್ ದಾಖಲಿಸಿದೆ.
ನವದೆಹಲಿ: ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಹೊಸ ಎಫ್ ಐಆರ್ ದಾಖಲಿಸಿದೆ. ಇದೀಗ ದಾಖಲಿಸಿದ ಎಫ್‌ಐ ಆರ್‌ನಲ್ಲಿ ಎನ್‌ಎಎಲ್‌ಸಿಒ (NALCO) ಮತ್ತು ಹಿಂಡಲ್‌ಕೋ (HINDALCO) ಕಂಪನಿ ಹಾಗು ಆದಿತ್ಯ ಬಿರ್ಲಾ ಗ್ರೂಪ್ ಚೇರ್‌ಮೆನ್ ಕುಮಾರ ಮಂಗಲಂ ಬಿರ್ಲಾ ಅವರ ಹೆಸರು ಉಲ್ಲೇಖಿಸಲಾಗಿದೆ.
ಅದೇ ವೇಳೆ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ ಪರೇಖ್ ಅವರ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್, ಕೊಲ್ಕತ್ತಾ ಮತ್ತು ಮುಂಬೈ ಮೊದಲಾದೆಡೆಯಲ್ಲಿ ಶೋಧ ಆರಂಭವಾಗಿದೆ.
ನವಂಬರ್ 10, 2005ರಂದು ಒಡಿಶಾದಲ್ಲಿ ಕಲ್ಲಿದ್ದಲಿನ ಎರಡು ಘಟಕಗಳ ಹಂಚಿಕೆ ನಡೆದಾಗ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಅದರದ್ದೇ ಸಹ ಕಂಪನಿಯಾಗಿರುವ ಹಿಂಡಾಲ್‌ಕೋ ಅವ್ಯವಹಾರ ನಡೆಸಿದೆ ಎಂದು ಬಿರ್ಲಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಏತನ್ಮಧ್ಯೆ, ಬಿರ್ಲಾ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಸಿಬಿಐ ಮೂಲಗಳು ಹೇಳಿವೆ.