ಕಾಂಗ್ರೆಸ್ ವಿರುದ್ಧ ಬಾಬಾ ರಾಮ್‌ದೇವ್ ಗುಡುಗು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಇದೀಗ ಕಾಂಗ್ರೆಸ್ ಸರ್ಕಾರದ...
ಹರಿದ್ವಾರ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಮಾಧ್ಯಮವೊಂದರಲ್ಲಿ ಮಾತನಾಡಿದ ಬಾಬಾ, ಇಲ್ಲಿಯವರೆಗೆ ನಾನು ಸಿಬಿಐ ಮೇಲೆ ಅನುಮಾನ ವ್ಯಕ್ತಪಡಿಸಿಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಸಿಬಿಐನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ಕಾಂಗ್ರೆಸ್ ಸರ್ಕಾರ ತಮ್ಮ ರಾಜಕೀಯ ದ್ವೇಷವನ್ನು ತೀರಿಸಲು ಸಿಬಿಐನ್ನು ಬಳಸಿಕೊಳ್ಳುತ್ತಿದೆ. ಜಗತ್ತಿಗೇ ಗೊತ್ತು ನಮ್ಮ ದೇಶ '10, ಜನಪಥ್'ದಿಂದ ಆಳಲ್ಪಡುತ್ತಿದೆ ಎಂದು ಗುಡುಗಿದ್ದಾರೆ.
ನಾನು ಸಿಬಿಐ ಅಥವಾ ಇನ್ಯಾವುದೇ ಏಜೆನ್ಸಿಗೆ ಹೆದರುವವನಲ್ಲ. ನಾನು ಯಾವುದೇ ತನಿಖೆಗೆ ಸಿದ್ಧ. ನನ್ನ ಜೀವನದಲ್ಲಿ ನಾನೇನೂ ತಪ್ಪು ಮಾಡಿಲ್ಲ ಎಂದಾದ ಮೇಲೆ ನಾನ್ಯಾಕೆ ಹೆದರಬೇಕು? ನಾನು ಕಾಂಗ್ರೆಸ್‌ನ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಂತೆ, ಅದು ನನ್ನ ಮೇಲೆ ಹೊಸ ಆರೋಪಗಳನ್ನು ಮಾಡತೊಡಗಿತು. ಕಾಂಗ್ರೆಸ್‌ನ ಅವ್ಯವಹಾರಗಳನ್ನು ನಾನು ಬಹಿರಂಗಪಡಿಸಲೆತ್ನಿಸಿದಾಗ ನನ್ನ ಮೇಲೆ ಆರೋಪಗಳನ್ನು ಹೊರಿಸಿ ಆರೋಪಿಯ ಪಟ್ಟ ಕಟ್ಟಲಾಯಿತು ಎಂದು ಬಾಬಾ ಹೇಳಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರೀಜಿ, ಜೈಪ್ರಕಾಶ್ ನಾರಾಯಣ್ ಜಿ, ಶ್ಯಾಮ ಪ್ರಸಾದ್ ಮುಖರ್ಜಿ ಅಥವಾ ಸಂತ ಕರ್‌ಪತ್ರೀಜೀ ಅಥವಾ ಇನ್ಯಾರೇ ಆಗಿರಲಿ ಕಾಂಗ್ರೆಸ್ ತನ್ನ ವಿರುದ್ಧ ಮಾತನಾಡುವವರನ್ನು ಸದ್ದಡಗಿಸುತ್ತಲೇ ಬಂದಿದೆ ಎಂದು ಬಾಬಾ ರಾಮ್‌ದೇವ್ ಕಿಡಿಕಾರಿದ್ದಾರೆ.
ನಾನು ಕಾಂಗ್ರೆಸ್‌ನ ಅವ್ಯವಹಾರಗಳನ್ನು ಬಯಲಿಗೆಳೆದಿರುವುದರಿಂದಲೇ ನನ್ನ ಮೇಲೆ ಕಾಂಗ್ರೆಸ್ ಹಗೆ ತೀರಿಸುತ್ತಿದೆ ಎಂದು ಬಾಬಾ ದೂರಿದ್ದಾರೆ.