ಟ್ಯೂಟಿಕೋರಿನ್ನಲ್ಲಿ ಅಮೆರಿಕದ ನೌಕೆ ವಶ: ಮಾಹಿತಿ ಇನ್ನೂ ನಿಗೂಢ
ಅಮೆರಿಕದ ಅಡ್ವಾನ್ಫೋರ್ಟ್ ಕಂಪನಿಗೆ ಸೇರಿದ ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ ನೌಕೆಯನ್ನು ತಮಿಳುನಾಡಿನ...
ಚೆನ್ನೈ/ಟ್ಯೂಟಿಕೋರಿನ್: ಅಮೆರಿಕದ ಅಡ್ವಾನ್ಫೋರ್ಟ್ ಕಂಪನಿಗೆ ಸೇರಿದ ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ ನೌಕೆಯನ್ನು ತಮಿಳ್ನಾಡಿನ ಟ್ಯೂಟಿಕೋರಿನ್ನಲ್ಲಿ ವಶಪಡಿಸಿಕೊಂಡು 48ಗಂಟೆ ಕಳೆದರೂ ನೌಕೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಶಸ್ತ್ರಾಸ್ತ್ರಗಳು ತುಂಬಿದ್ದ ಈ ನೌಕೆ ಯಾವುದೇ ಅನುಮತಿ ಇಲ್ಲದೆ ಭಾರತದ ಕಡಲಿಗೆ ಹೇಗೆ ಬಂತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಸೆರ್ರೆ ಲಿಯೋನ್ ಪತಾಕೆ ಹೊಂದಿರುವ ಸೀಮ್ಯಾನ್ ಗಾರ್ಡ್ ಓಹಿಯೋ ನೌಕೆ ಶುಕ್ರವಾರ ರಾತ್ರಿ ಭಾರತಕ್ಕೆ ಪ್ರವೇಶಿಸಿದ್ದು, ಶನಿವಾರ ಬೆಳಗ್ಗೆ ಟ್ಯೂಟಿಕೋರಿನ್ನಲ್ಲಿ ಕರಾವಳಿ ಕಾವಲು ಪಡೆ ನೌಕೆಯನ್ನು ವಶಕ್ಕೆ ತೆಗೆದುಕೊಂಡಿತ್ತು.
ನೌಕೆಯಲ್ಲಿ ಶಸ್ತ್ರಾಸ್ತ್ರಗಳು ಇರುವುದರಿಂದ ಕರಾವಳಿ ಕಾವಲು ಪಡೆಯ ನೌಕೆಯೊಂದು ಎಂವಿ ಸೀಮ್ಯಾನ್ ಗಾರ್ಡ್ ನೌಕೆಗೆ ಬೆಂಗಾವಲಾಗಿ ನಿಂತಿದೆ.
ಅಮೆರಿಕದ ಅಡ್ವಾನ್ಫೋರ್ಟ್ ಕಂಪನಿ ಕಡಲ್ಗಳ್ಳರ ವಿರುದ್ಧ ಸಮುದ್ರ ಸುರಕ್ಷಾ ಕಾರ್ಯ ನಿರ್ವಹಿಸುತ್ತಿದ್ದು, ಸೆರ್ರಾ ಲಿಯೋನ್ ಎಂಬುದು ಪಶ್ಚಿಮ ಆಫ್ರಿಕಾದ ದೇಶವಾಗಿದೆ.
ನೌಕೆಯಲ್ಲಿ ಬಂಧಿತರಾಗಿರುವ 35 ಸದಸ್ಯರನ್ನು ಈಗಾಗಲೇ ವಿಚಾರಣೆಗೊಳಪಡಿಸಿದ್ದರೂ, ಸ್ಪಷ್ಟವಾದ ಮಾಹಿತಿ ಇನ್ನೂ ಹೊರಬಂದಿಲ್ಲ.