ಪ್ರಧಾನಿ ದನಿ ಅನುಕರಿಸಿ ಹುಸಿಕರೆ ಮಾಡಿದ ವ್ಯಕ್ತಿಗೆ ಜಾಮೀನು
ಪ್ರಧಾನಿ ಮನಮೋಹನ್ ಸಿಂಗ್ ಅವರ ದನಿಯನ್ನು ಅನುಕರಿಸಿ ಹುಸಿ ಕರೆ ಮಾಡಿದ ವ್ಯಕ್ತಿ ಗೆ ದೆಹಲಿ ನ್ಯಾಯಾಲಯ ಮಂಗಳವಾರ...
ನವದೆಹಲಿ: ಪ್ರಧಾನಿ ಮನಮೋಹನ್ ಸಿಂಗ್ ಅವರ ದನಿಯನ್ನು ಅನುಕರಿಸಿ ಹುಸಿ ಕರೆ ಮಾಡಿದ ವ್ಯಕ್ತಿ ಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.
ಪ್ರಧಾನಿ ಹೆಸರಿನಲ್ಲಿ ಹುಸಿ ಕರೆ ಮಾಡಿದ ವಿಕಾಸ್ ದತ್ತಾ ಶರ್ಮಾ ಅವರಿಗೆ ಜಾಮೀನು ನೀಡಿದ ಚೀಫ್ ಮೆಟ್ರೋಪೊಲಿಟನ್ ಮೆಜಿಸ್ಟ್ರೇಟ್ ಲೋಕೇಶ್ ಕುಮಾರ್ ಶರ್ಮಾ, ದೆಹಲಿ ಬಿಟ್ಟು ಎಲ್ಲೂ ಹೋಗದಂತೆ ತಾಕೀತು ನೀಡಿದ್ದಾರೆ.
ವಿಕಾಸ್ ಅವರಿಗೆ 30,000 ರು ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಮುಚ್ಚಳಿಕೆ ಮೇರೆಗೆ ಜಾಮೀನು ನೀಡಲಾಗಿದೆ.
ಹುಸಿ ಕರೆ ಮಾಡಿದ ಆರೋಪದಲ್ಲಿ ಟಿ ಸೀರೀಸ್ ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ನ ಮಾಜಿ ನೌಕರ ಕ್ರಿಶನ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಕ್ರಿಶನ್ ಕುಮಾರ್ನ್ನು ವಿಚಾರಣೆಗೊಳಪಡಿಸಿದಾಗ ಪ್ರಸ್ತುತ ಪ್ರಕರಣದಲ್ಲಿ ವಿಕಾಸ್ ಅವರ ಕೈವಾಡವೂ ಇದೆ ಎಂಬುದು ಬಹಿರಂಗಗೊಂಡಿತ್ತು. ಇವರಿಬ್ಬರೂ ಹಣದ ಆಸೆಯಿಂದ ಈ ಕೃತ್ಯ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆದಾಗ್ಯೂ, ಕ್ರಿಶನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದ್ದರಿಂದ ಕ್ರಿಶನ್ಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಅದೇ ವೇಳೆ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೂ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.