ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಬಗ್ಗೆ ಭಯಹುಟ್ಟಿಸಿ ಮತ ಪಡೆಯಲೆತ್ನಿಸಬೇಡಿ

ಸೋ ಕಾಲ್ಡ್ ಸೆಕ್ಯುಲರ್ ಪಾರ್ಟಿಗಳು ಮೋದಿ ಬಗ್ಗೆ ಭಯಹುಟ್ಟಿಸಿ ಮುಸ್ಲಿಂ ಮತಗಳನ್ನು ಪಡೆಯಲೆತ್ನಿಸುತ್ತಿವೆ ಎಂದು ಹೇಳುವ ಮೂಲಕ...

Rashmi Kasaragodu
Updated On : 15 Oct 2013, 7:56 am

ನವದೆಹಲಿ: ಸೋ ಕಾಲ್ಡ್ ಸೆಕ್ಯುಲರ್ ಪಾರ್ಟಿಗಳು ಮೋದಿ ಬಗ್ಗೆ ಭಯಹುಟ್ಟಿಸಿ ಮುಸ್ಲಿಂ ಮತಗಳನ್ನು ಪಡೆಯಲೆತ್ನಿಸುತ್ತಿವೆ ಎಂದು ಹೇಳುವ ಮೂಲಕ ಮುಸ್ಲಿಂ ನಾಯಕ ಮೌಲಾನಾ ಮೆಹಮೂದ್ ಮದನಿ ವಿವಾದ ಸೃಷ್ಟಿಸಿದ್ದಾರೆ.

ಏತನ್ಮಧ್ಯೆ ಕಾಂಗ್ರೆಸ್ ಜನರನ್ನು ವಿಭಜಿಸಿ ಆಳುವ ನೀತಿ ಅನುಸರಿಸುತ್ತಿದೆ, ಇದನ್ನು ಜನರು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್, ಮೋದಿ ಬಗ್ಗೆ ಜನರಿಗೆ ಈ ಹಿಂದಿನಿಂದಲೇ ಭಯ ಇತ್ತು ಎಂದು ಹೇಳಿದೆ.

ಮುಸ್ಲಿಂ ಸಂಘಟನೆಯಾದ ಜಮಾಯತ್ ಉಲೇಮಾ ಇ ಹಿಂದ್ ನಾಯಕನಾಗಿರುವ ಮದನಿ, ಸೋಕಾಲ್ಡ್ ಜಾತ್ಯಾತೀತ ಪಕ್ಷಗಳು ನಕಾರಾತ್ಮಕ ರೀತಿಯಲ್ಲಿ ಮತಯಾಚಿಸುವುದನ್ನು ಬಿಟ್ಟು, ತಾವು ವಾಗ್ದಾನ ನೀಡಿದ ಕಾರ್ಯಗಳನ್ನು ಪೂರೈಸುವ ಮೂಲಕ ಧನಾತ್ಮಕ ರೀತಿಯಲ್ಲಿ ಮತಯಾಚಿಸಬೇಕೆಂದು ಹೇಳಿದ್ದಾರೆ.

ಸೋಕಾಲ್ಡ್ ಸೆಕ್ಯುಲರ್ ಪಕ್ಷಗಳು ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏನೆಲ್ಲಾ ಪುರೋಗತಿ ಮಾಡಿದೆ ಎಂಬುದನ್ನು ವಿವರಿಸಬೇಕು. ಮಾತ್ರವಲ್ಲದೆ ತಾವು ಭರವಸೆ ನೀಡಿದ ಕಾರ್ಯಗಳನ್ನು ಪೂರೈಸಬೇಕು. ನಾವು ಮಾಡಿದ ಕಾರ್ಯಗಳನ್ನು ನೋಡಿ ಮತ ಹಾಕುತ್ತೇಯೇ ವಿನಾ ಯಾರೊಬ್ಬರಿಗೆ ಹೆದರಿಕೊಂಡು ಮತ ಹಾಕಲ್ಲ ಎಂದು ಮದನಿ ಮಾಧ್ಯಮದವರಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement