ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಬೆಂಕಿ, ಪ್ರಯಾಣಿಕರು ಸುರಕ್ಷಿತ
ದಿಬ್ರೂಗಡ್ ನಿಂದ ನವದೆಹಲಿ ನಡುವೆ ಸಂಚರಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದೆ...
ಗುವಾಹಟಿ: ದಿಬ್ರೂಗಡ್ ನಿಂದ ನವದೆಹಲಿ ನಡುವೆ ಸಂಚರಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದೆ. ಅಸ್ಸಾಂ ಮೊರಿಗಾಂವ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ವೇಳೆ ಬೆಂಕಿ ಹತ್ತಿಕೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.
ರೈಲಿನ ಅಡುಗೆ ಕೋಣೆಯಿರುವ ಬೋಗಿಯಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ರೈಲನ್ನು ಧರಾಮ್ತುಲ್ನಲ್ಲಿ ನಿಲ್ಲಿಸಿ ಬೆಂಕಿ ನಂದಿಸಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.
ಬೆಂಕಿಗೀಡಾದ ಬೋಗಿ ಪೂರ್ಣವಾಗಿ ಸುಟ್ಟುಹೋಗಿದ್ದು, ಅಲ್ಲಿದ್ದ 15 ಮಂದಿ ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ಈಶಾನ್ಯ ರೇಲ್ವೆ ವಕ್ತಾರ ಹೇಳಿದ್ದಾರೆ.
ದಿಬ್ರೂಗಡ್ ನಗರದಿಂದ ನವದೆಹಲಿಗೆ ಬರುತ್ತಿದ್ದ 12435 ನಂಬರ್ ರೈಲು ನಿನ್ನೆ ರಾತ್ರಿ 8.30ಕ್ಕೆ ದಿಬ್ರೂಗಡ್ನಿಂದ ಹೊರಟಿತ್ತು. ಅದು ಇಂದು ಬೆಳಗ್ಗೆ 6.40ಕ್ಕೆ ಗುವಾಹಟಿ ತಲುಪಬೇಕಿತ್ತು.
ಇದೀಗ ರೈಲು ತನ್ನ ಯಾತ್ರೆ ಮುಂದುವರಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.